ಬೆಂಗಳೂರಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ( THLIB HUSSAIN ) ಎಂಬಾತನನ್ನ ಬಂಧಿಸಲಾಗಿದೆ. ಜಮ್ಮ ಮತ್ತು ಕಾಶ್ಮೀರ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಲ್ಲಿ ಈತ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡ್ತಿದ್ದ. ಬಿಎನ್ಎಲ್ ಏರ್ ಸರ್ವಿಸ್ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದ. ಬೆಂಗಳೂರಿಗೆ ಬರುವಾಗ ತಾಲಿಬ್ ಹುಸೇನ್ ತನ್ನ ಪೊಲೀಸ್ ಪತ್ನಿಯನ್ನು ಕರೆದುಕೊಂಡು ಬಂದಿದ್ದು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ.ಪತ್ನಿ ಮತ್ತು 3 ಜನ ಮಕ್ಕಳ ಜೊತೆಗೆ ವಾಸವಿದ್ದ. ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷ ಈತನಿಗೆ ಆಶ್ರಯ ನೀಡಿದ್ರು. ಮಸಿದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಅನ್ನೋ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ : – RSS, ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದುಗೆ ಇರುವ ಗೌರವ ಹಾಳಾಗುತ್ತೆ – ಯಡಿಯೂರಪ್ಪ
ಸದ್ಯ ತಾಲಿಬ್ ನನ್ನು ಬಂಧಿಸಿರುವ ಸಿಆರ್ ಪಿಎಫ್ ಯೋಧರು ಆತನನ್ನ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಇಂತಹ ಶಂಕಿತರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿರುತ್ತೆ. ನಮ್ಮ ಕೇಂದ್ರ ಸರ್ಕಾರ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು. ಜೂನ್ 3ರಂದೆ ಶಂಕಿತ ಆರೋಪಿಯ ಬಂಧನವಾಗಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ : – ಬೆಲೆ ಹೆಚ್ಚಳ ಮಾಡಿರೋದು ಮೋದಿ ಸಾಧನೆ – ಬೆಳಗಾವಿಯಲ್ಲಿ ಸಿದ್ದರಾಮಯ್ಯ ಟಾಂಗ್