ರಾಜಸ್ತಾನದ ಉದಯಪುರ (Rajasthan udaipur) ದಲ್ಲಿ ಟೈಲರ್ (Tailor) ನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಅಮಾನವೀಯ ಮತ್ತು ಅತ್ಯಂತ ಹೇಯಕೃತ್ಯ. ಇದು ಭಯೋತ್ಪಾದಕ ಕೃತ್ಯ, ಅದರ ಹಿಂದೆ ಬಹಳ ದೊಡ್ಡ ಅಂತಾರಾಷ್ಟ್ರೀಯ ಷಡ್ಯಂತ್ರವಿದ್ದು, ಅವರನ್ನು ಗಲ್ಲಿಗೇರಿಸಬೇಕು.
ಇದನ್ನು ಗಂಭೀರವಾಗಿ ತೆಗೆದುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣ ತನಿಖೆಯಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಆಗ್ರಹಿಸಿದ್ದಾರೆ. ಉದಯಪುರ ಘಟನೆಯ ಹಿಂದೆ ಯಾರಿದ್ದಾರೆ, ಯಾವ ಸಂಘ-ಸಂಸ್ಥೆಗಳಿವೆ ಎಂದು ಸಂಪೂರ್ಣ ತನಿಖೆಯಿಂದ ಹೊರಗೆಬರಬೇಕು. ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ (Terrorist organisation) ಯ ಕೈವಾಡವಿರುವ ಸಾಧ್ಯತೆಯಿದೆ ಎಂದರು. ಇಂದಿಗೆ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಜಾರಿಗೆ ಬಂದು 5 ವರ್ಷವಾಗಿದೆ. ಜಿಎಸ್ ಟಿಯಲ್ಲಿನ ಕಾನೂನು ತೊಡಕುಗಳನ್ನು ನಿವಾರಣೆ ಮಾಡಲು ಕಾನೂನು ಸಮಿತಿಯಿರುತ್ತದೆ. ಇದನ್ನೂ ಓದಿ : – ಔರಂಗಾಬಾದ್ ಇನ್ನು ಸಂಭಾಜಿ ನಗರ – ವಿದಾಯದ ವೇಳೆ ಕೆಲ ನಗರಗಳ ಮರುನಾಮಕರಣ ಮಾಡಿದ ಠಾಕ್ರೆ..!
ಇನ್ನೊಂದು ಫಿಟ್ ಮೆಂಟ್ ಕಮಿಟಿಯಿರುತ್ತದೆ(ಹೊಂದಾಣಿಕೆ ಸಮಿತಿ). ಅದರ ಶಿಫಾರಸುಗಳನ್ನು ಕೂಡ ತೆಗೆದುಕೊಂಡಿದ್ದೇವೆ. ಮೊನ್ನೆ ಚಂಡೀಗಢದಲ್ಲಿ ನಡೆದ 47ನೇ ಜಿಎಸ್ ಟಿ ಸಭೆಯಲ್ಲಿ ಪರಿಹಾರ ವಿಸ್ತರಣೆ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುವುದಾಗಿ ನಿರ್ಮಲಾ ಸೀತರಾಮನ್ ಹೇಳಿದ್ದಾರೆ ಎಂದರು. ಇದನ್ನೂ ಓದಿ : – ಗೋವಾದಿಂದ ಮುಂಬೈಗೆ ರೆಬೆಲ್ ಶಾಸಕರು ವಾಪಸ್