ಬೆಂಗಳೂರು ಮಹಾ ನಗರ ಪಾಲಿಕೆ ಚುನಾವಣೆ (BBMP election) ಗೆ ಸಿಎಂ ಬೊಮ್ಮಾಯಿ (Bommai) ತೆರೆಮರೆಯಲ್ಲಿ ತಯಾರಿ ನಡೆಸಿದ್ದಾರೆ. ಬೆಂಗಳೂರು (Bengaluru) ಸಮಸ್ಯೆಗಳನ್ನೇ ಸಿಎಂ ಚುನಾವಣೆ ಮೂಲ ಮಂತ್ರ ಮಾಡಿಕೊಂಡಿದ್ದಾರೆ.
ಹೀಗಾಗಿ ಈ ಬಾರಿ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಬೊಮ್ಮಾಯಿ ಅಧಿಕಾರಿಗಳಿಗೆ ಟಾಸ್ಕ್ ಕೊಟ್ಟಿದ್ದಾರೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ (Traffic) , ರಸ್ತೆ ಸಮಸ್ಯೆಗೆ ಸಿಎಂ ಹೆಚ್ಚು ಒತ್ತು ನೀಡಿದ್ದಾರೆ. ಈ ವಿಚಾರಕ್ಕೆ ಎರಡೂ ವಿಭಾಗದ ಅಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಿದ್ದಾರೆ. ಈ ರೀತಿಯಲ್ಲಿ ಪ್ರತಿಯೊಂದು ವಿಭಾಗದ ಅಧಿಕಾರಿಗಳ ಜೊತೆಗೆ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಶಾಸಕರಿಗೆ ಕ್ಷೇತ್ರ ರಕ್ಷಣೆ ಪಾಠ, ಅಧಿಕಾರಿಗಳಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ. ಟ್ರಾಫಿಕ್ ಐಜಿ, ಡಿಸಿಪಿಗಳು ಬಿಬಿಎಂಪಿ ಕಮಿಷನರ್ (BBMP commissioner) ಹಾಗೂ BWSSB ಇಂಜಿನಿಯರ್ ಜೊತೆಗೆ ಸಿಎಂ ಸಭೆ ಮಾಡಿದ್ದಾರೆ. ಏನೇ ಸಮಸ್ಯೆ ಆದರೂ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಸಿಎಂ ಸಂದೇಶ ನೀಡಿದ್ದಾರೆ. ಪ್ರತಿಯೊಂದು ಕ್ಷೇತ್ರದ ಮೂಲ ಸಮಸ್ಯೆ ಬಗ್ಗೆ ಸಿಎಂ ಬೊಮ್ಮಾಯಿ ಮಾಹಿತಿ ಪಡೆದಿದ್ದಾರೆ. ಬೆಂಗಳೂರು ಮೂಲ ಸೌಕರ್ಯ ಬಗ್ಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.ಅಧಿಕಾರಿಗಳು ಕಣ್ಮುಚ್ಚಿಕೊಂಡು ಕೆಲಸ ಮಾಡದಂತೆ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ : – ಮಹಾರಾಷ್ಟ್ರ ಬಿಕ್ಕಟ್ಟು- ಏಕನಾಥ್ ಶಿಂಧೆ ಟೀಂನ ಅನರ್ಹತೆ ನೊಟೀಸ್- ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ
ಮೋದಿ (Modi) ಕಾರ್ಯಕ್ರಮದಲ್ಲಿ ರಸ್ತೆ ದುರಸ್ತಿಗೆ ಸಾಕಷ್ಟು ಡ್ಯಾಮೇಜ್ ಆಗಿದೆ. ಈ ರೀತಿಯ ಕಾಮಗಾರಿ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಮೆಟ್ರೋ ಕಾಮಗಾರಿ (Metro construction) ಯಿಂದ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ. ಮಳೆ ನೀರು ಹರಿದು ಹೋಗುವ ಸ್ಥಳಗಳನ್ನು ಗುರುತಿಸಿ.ಕೆಲವು ಕಡೆ ಟ್ರಾಫಿಕ್ ಬಗ್ಗೆ ಸಾಕಷ್ಟು ದೂರುಗಳು ಬರ್ತಿದೆ. ಅಂತಹ ಕಡೆ ಪರ್ಯಾಯ ಮಾರ್ಗ ಕಂಡು ಹಿಡಿಯಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಶಿಕ್ಷಣ ಸಚಿವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಸರ್ಕಾರದ ಹಣ ದುರುಪಯೋಗ – ಬಿ.ಸಿ ನಾಗೇಶ್ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿ