ದ್ವಿಚಕ್ರ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ- ಯುವತಿ ಸಾವು

ದ್ವಿಚಕ್ರ ವಾಹನ (Two wheeler) ಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಆರ್ ಪುರಂ (KR.Puram) ನ ಹ್ಯಾಂಗಿಂಗ್ ಬ್ರಿಡ್ಜ್ ಮೇಲೆ ನಡೆದಿದೆ. ಶಾಲಿನಿ ( 27) ಮೃತ ದುರ್ದೈವಿ. ಕೋರಮಂಗಲ (Koramangala) ನಿವಾಸಿಯಾದ ಶಾಲಿನಿ ಜೆಪಿ ನಗರದ ನೀರಾ ಥಾಯ್ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದರು.

ಬೆಳಗ್ಗೆ 6.30 ರ ಸಮಯದಲ್ಲಿ ಅಪಘಾತ ಸಂಭವಿಸಿದೆ. ವೇಗವಾಗಿ ಅಜಾಗರೂಕತೆಯಿಂದ ಬಂದ ಟಾಟಾ ಏಸ್ ವಾಹನ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕೆಆರ್ ಪುರಂ ನಿಂದ ಟಿನ್ ಫ್ಯಾಕ್ಟರಿ ಕಡೆಗೆ ವಾಹನಗಳು ಬರುತ್ತಿತ್ತು .ರಸ್ತೆಯ ಮೇಲೆ ಬಿದ್ದ ಯುವತಿ ಹಾಗೂ ಹಿಂಬದಿ ಸವಾರನಿಗೆ ಗಾಯವಾಗಿದ್ದರಿಂದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶಾಲಿನಿ ಸಾವನ್ನಪ್ಪಿದ್ದಾರೆ. ಇಬ್ಬರು ಕೂಡ ಹೆಲ್ಮೆಟ್ ಹಾಕಿಕೊಂಡು ಚಾಲನೆ ಮಾಡುತ್ತಿದ್ದರು. ಟಾಟಾ ಏಸ್ ವಾಹನ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : – ಬೆಂಗಳೂರನ್ನ ಏನ್ ಮಾಡಿದ್ದಾರೆ ಗೊತ್ತಿಲ್ವಾ.? – ಸುಧಾಕರ್ ವಿರುದ್ದ ಹೆಚ್ಡಿಕೆ ಗುಡುಗು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!