ಸರ್ಕಾರಿ ಶಾಲಾ ಮಕ್ಕಳಿಗೆ ಕೋಲಾರ ಎಸ್ಪಿ ಡಿ ದೇವರಾಜ್ (kolara sp Devaraj) ಪಾಠ ಮಾಡಿದ್ದಾರೆ. ಕೋಲಾರ ತಾಲ್ಲೂಕಿನ ವೇಮಗಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿದ್ದಾರೆ.
ಖಾಸಗಿ ಕಂಪನಿ ವತಿಯಿಂದ ಶಾಲಾ ಮಕ್ಕಳಿಗೆ ನೂಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಶಾಲಾ ಕೊಠಡಿಗೆ ತೆರಳಿ ಎಸ್ಪಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಈ ಹಿಂದೆ ಎಸ್ಪಿ ಉಪನ್ಯಾಸಕರಾಗಿ ಸೇವೆ ಸಲ್ಲಿದ್ದರು. ಸೂಕ್ಷ್ಮಾಣು ಜೀವಿಗಳ ಕುರಿತು ಮಕ್ಕಳಿಗೆ ಪಾಠ ಮಾಡುವ ಮೂಲಕ ಉಪನ್ಯಾಸ ವೃತ್ತಿಯನ್ನು ಎಸ್ಪಿ ಡಿ ದೇವರಾಜ್ ಮೆಲುಕು ಹಾಕಿದರು.
ಚಾಕ್ ಪೀಸ್ ಹಿಡಿದು ಬೋರ್ಡ್ ಮೇಲೆ ಸೂಕ್ಷ್ಮಾಣು ಜೀವಿಗಳ ಬಗ್ಗೆ ಚಿತ್ರ ಬರೆದು ಮಕ್ಕಳಿಗೆ ಅರ್ಥ ಹಾಗೋ ಹಾಗೇ ಎಸ್ಪಿ ಪಾಠ ಮಾಡಿದರು. ಎಸ್ಪಿ ಪಾಠ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : – ಚಿಕ್ಕಬಳ್ಳಾಪುರದಲ್ಲಿ ಪರಿಷ್ಕೃತ ಪಠ್ಯಪುಸ್ತಕ, ಅಗ್ನಿಪಥ್ ಯೋಜನೆ ವಿರುದ್ದ ಪ್ರತಿಭಟನೆ