ಇಂಡಿಕಾ ಕಾರು (Indica car) ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ತುಮಕೂರು (Tumkuru) ಜಿಲ್ಲೆ ಗುಬ್ಬಿ ತಾಲ್ಲೂಕಿನ ಕೊಂಡ್ಲಿಕ್ರಾಸ್ ಬಳಿ ನಡೆದಿದೆ. ನಾರಾಯಣಪ್ಪ (50), ರಾಮಣ್ಣ(55) ಸಾಗರ್ (22), ನಾಗರತ್ನಮ್ಮ (40) ಮೃತಪಟ್ಟ ದುರ್ದೈವಿ. ಮೃತರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನಡುವನಹಳ್ಳಿ ಗ್ರಾಮದವರಾಗಿದ್ದಾರೆ.
ಇಂಡಿಕಾ ಕಾರು ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರಿ (Bengaluru) ಗೆ ಹೋಗ್ತಿತ್ತು. ಕ್ಯಾಂಟರ್ ತುಮಕೂರು ಕಡೆಯಿಂದ ತಿಪಟೂರು ಕಡೆಗೆ ಹೋಗ್ತಿದ್ದ ವೇಳೆ ಅಪಘಾತ ನಡೆದಿದೆ. ನಿನ್ನೆ ರಾತ್ರಿ ಕೂಡ ಇದೇ ಸ್ಥಳದಲ್ಲಿ ಅಪಘಾತ ನಡೆದು ಇಬ್ಬರು ಸಾವನ್ನಪ್ಪಿದ್ದರು. ಮತ್ತೆ ಅದೇ ಸ್ಥಳದಲ್ಲಿ ಘಟನೆ ನಡೆದಿದ್ದು, ಇಂದು ನಾಲ್ವರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನೀತಿಗೆ ಅಮಾಯಕರು ಬಲಿಯಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನೀತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ : – ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೈಡ್ ಲೈನ್ ಆಗ್ತಿದ್ದಾರಾ..?