ವಿಧಾನಸೌಧದ (Vidhana soudha) ಗಾಂಧಿ ಪ್ರತಿಮೆ (Gandhi statue) ಮುಂಭಾಗ ಕಾಂಗ್ರೆಸ್ ಜನಪ್ರತಿನಿಧಿಗಳು ಧರಣಿ ನಡೆಸುತ್ತಿದ್ದಾರೆ. ಕಾಂಗ್ರೆಸ್(Congress) ಪಕ್ಷದ ಸಂಸದರು , ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ (DK.Shivkumar) , ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ (MB.Patil) , ಸಲೀಂ ಅಹ್ಮದ್ , ದೃವನಾರಾಯಣ್, ರಾಮಲಿಂಗಾರೆಡ್ಡಿ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬುದ್ಧ , ಬಸವ, ಅಂಬೇಡ್ಕರ್ (Ambedker) ಪಠ್ಯದಲ್ಲಿ ಕೈಬಿಟ್ಟಿದ್ದಕ್ಕೆ ಆಕ್ರೋಶ ಪಟ್ಟಿದ್ದಾರೆ. ಕುವೆಂಪು (Kuvempu) ಅವಹೇಳನದ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ,ಆರ್ ಎಸ್ ಎಸ್ (RSS) ನಾಯಕರು ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC.Nagesh) ವಿರುದ್ದ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ : – ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿ – ಕಾಂಗ್ರೆಸ್ ಗೆ ಶಾಸಕ ಬಂಡೆಪ್ಪ ಕಾಶೆಂಪೂರ್ ಮನವಿ
ಗಾಂಧೀಜಿಯವರ ಬದುಕನ್ನೇ ತಿರುಚಿದ್ದಾರೆ – ಡಿಕೆಶಿ ಆಕ್ರೋಶ
ಬಸವಣ್ಣ, ಅಂಬೇಡ್ಕರ್ ಎಲ್ಲರೂ ತ್ಯಾಗ ಮಾಡಿದ್ದಾರೆ. ಸಮಾಜ ಸುಧಾರಣೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ (DK.Shivkumar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿದ್ದಗಂಗಾ (Sidanganga) ,ಆದಿಚುಂಚನಗುರಿ (Adhichunchanagiri) ಶ್ರೀಗಳಿಗೆ ಅಪಮಾನಿಸಲಾಗಿದೆ. ಅನ್ನದಾಸೋಹ,ಅಕ್ಷರದಾಸೋಹಕ್ಕೆ ನಮ್ಮ ಶ್ರೀಗಳು ಹೆಸರುವಾಸಿಯಾಗಿದ್ದಾರೆ. ಅಂತವರ ಹೆಸರುಗಳನ್ನ ಅಳಿಸಲು ಹೊರಟಿದ್ದಾರೆ. ಗಾಂಧೀಜಿಯವರ ಬದುಕನ್ನೇ ತಿರುಚಿದ್ದಾರೆ ಬಿಜೆಪಿ ಧೋರಣೆ ಮನಸ್ಥಿತಿ ಎಲ್ಲವೂ ಹೊರಬರ್ತಿದೆ.ಸಂವಿಧಾನವನ್ನ ಕೊಟ್ಟವರು ಅಂಬೇಡ್ಕರ್. ಅಂತವರಿಗೆ ನೀವು ಅಪಮಾನ ವೆಸಗಿದ್ದೀರಾ. ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ :- ಜೆಡಿಎಸ್ ಗೆ ಅಡ್ಡಮತದಾನದ ಭೀತಿ–ಶಾಸಕರು ರೆಸಾರ್ಟ್ ಗೆ ಶಿಫ್ಟ್ ..?