ಬ್ಲೂಟೂತ್ ನಲ್ಲಿ ಆರೋಪಿತ ಅಭ್ಯರ್ಥಿಗಳಿಗೆ ಉತ್ತರ ರವಾನಿಸಿ ಅಕ್ರಮ ಎಸಗಿರುವ ಮತ್ತೊಂದು ಸ್ಫೋಟಕ ಅಂಶ ಬಯಲಾಗಿದೆ. ಬ್ಲೂಟೂತ್ ಮೂಲಕ ಉತ್ತರ ರವಾನಿಸಿದ್ದಾರೆ.
ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಮಾಹಿತಿ ಬಹಿರಂಗಗೊಂಡಿದೆ. ಲೀಕ್ ಆದ ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ಸಿದ್ಧಪಡಿಸಿಕೊಂಡಿದ್ದ ಆರೋಪಿಗಳು ಹಣ ಕೊಟ್ಟು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ ಮಾಡಿಸಿದ್ದಾರೆ. ಇದನ್ನೂ ಓದಿ :- ತಜ್ಞರು ಈಗಾಗಲೇ ವೈರಸ್ ಯಾವ ಮಾದರಿ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ – ಬೊಮ್ಮಾಯಿ
ದಾಳಿ ನಡೆಸಿರುವ ಅಧಿಕಾರಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಲಭ್ಯವಾಗಿದ್ದು, ಆರೋಪಿಗಳ ಎಟಿಎಂ ಕಾರ್ಡ್ ಗಳು ಸಹ ದೊರೆತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಉತ್ತರ ನೀಡಲಾಗಿದ್ದು, ಹಣಕೊಟ್ಟ ಅಭ್ಯರ್ಥಿಗಳಿಗೆ A-B-C-D ಮಾದರಿ ಪ್ರಶ್ನೆಪತ್ರಿಕೆಗಳಂತೆ ಒಂದೇ ಬಾರಿಗೆ ಉತ್ತರ ಹೇಳಿಕೊಟ್ಟಿದ್ದಾರೆ. ಇದೀಗ ಪ್ರಶ್ನೆ ಪತ್ರಿಕೆಗೆ ಉತ್ತರ ಕೊಡುವ ವೀಡಿಯೋ ವೈರಲ್ ಆಗಿದೆ.
ಇದನ್ನೂ ಓದಿ :- ಡಾ.ರಾಜ್ ಕುಮಾರ್ ಆದರ್ಶಗಳನ್ನು ನಾವು ಪಾಲಿಸಬೇಕು – ನಳೀನ್ ಕುಮಾರ್ ಕಟೀಲ್