ಚಿಕ್ಕಮಗಳೂರು (chikkamagalur) ಜಿಲ್ಲೆಯ ಹೊಸಪೇಟೆ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಸುಪ್ರೀತ ಮೃತ ದೇಹವು 40 ಗಂಟೆ ಕಳೆದರೂ ಪತ್ತೆಯಾಗಿಲ್ಲ. ಸುಪ್ರೀತ ಮೃತ ದೇಹದ ಪತ್ತೆಗಾಗಿ ಎಸ್ ಡಿ ಆರ್ ಎಫ್ 20 ಜನರ ತಂಡ ಹೊಸಪೇಟೆ ಗ್ರಾಮಕ್ಕೆ ಆಗಮಿಸಿದೆ. ಶೋಧಕಾರ್ಯ ಆರಂಭಿಸಿದೆ. ಮುಳುಗು ತಜ್ಞ ಮಲ್ಪೆ ಈಶ್ವರ್ ಕೂಡ ಸ್ಧಳಕ್ಕೆ ಆಗಮನಿಸಿದ್ದಾರೆ.
ಈ ನಡುವೆ ಚಿಕ್ಕಮಗಳೂರಿನಲ್ಲಿಯೂ ಮಳೆ ಮುಂದುವರೆದಿದೆ. ಕಳಸ (kalasa) ತಾಲೂಕಿನ ಹೆಮ್ಮಕ್ಕಿಯಲ್ಲಿ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಆಗಿದೆ. ಮನೆಯಲ್ಲಿದ್ದ ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೆರೆಕಟ್ಟೆ ಹಾಗೂ ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗೆಯ ಅಬ್ಬರಕ್ಕೆ ಶೃಂಗೇರಿ ಶಾರದಾಂಭೆ ದೇಗುಲದ ಪಾರ್ಕಿಂಗ್ ಜಾಗ ಸಂಪೂರ್ಣ ಮುಳುಗಡೆಯಾಗಿದೆ.
ಇದನ್ನೂ ಓದಿ :- ಕರಾವಳಿ, ಕೊಡಗು,ಭಾಗಗಳಲ್ಲಿ ಮಳೆ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಕೆ