ಕೋರ್ಟ್ ತೀರ್ಪಿನಂತೆ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಸರ್ಕಾರ ಆದೇಶ ಕೊಟ್ಟಿದೆ – ಕೋಟ ಶ್ರೀನಿವಾಸ್ ಪೂಜಾರಿ

ಯಾರಾದರೂ ಸಂಪ್ರದಾಯದ ಹೆಸರಿನಲ್ಲಿ ಅನ್ಯಾಯ ಮಾಡುತ್ತಿದ್ದಾರೆ ಅಂದರೆ ಅದು ಅವರ ಸಂಸ್ಕೃತಿ ಬಿಂಬಿಸುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Mangaluru: Minister Kota Srinivas Poojary writes to CM Yediyurappa, seeks  easing of curbs on religious events

ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ಕೆಲ ಸಂಘಟನೆಗಳಿಂದ ತಾಲಿಬಾನ್ ಮಾದರಿ ಸಂಸ್ಕೃತಿ ಹೇರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರೇನು ಹೇಳ್ತಾರೆ, ಇವರೇನು ಹೇಳ್ತಾರೆ ಅನ್ನೋದು ಯಾವುದೂ ಅಲ್ಲ. ಸಂವಿಧಾನ ಬದ್ಧವಾಗಿ ರಾಜ್ಯದ ಉಚ್ಚ ನ್ಯಾಯಾಲಯ ಸಮವಸ್ತ್ರ ಪಾಲಿಸಿ ಎಂದು ಹೇಳಿದೆ. ಅದನ್ನು ಪಾಲಿಸಬೇಕು ಅನ್ನೋದು ಸರ್ಕಾರದ ನಿಲುವಾಗಿದೆ. ಹೈಕೋರ್ಟ್ ತೀರ್ಪುನ್ನು ಮೀರಿ ಯಾರಾದರೂ ಹೇಳುತ್ತಾರೆ ಅಂದರೆ ಅವರಿಗೆ ಸಂವಿಧಾನದ ಮೇಲೆ ಇರುವ ಗೌರವವನ್ನು ಪ್ರಶ್ನಿಸುವ ಅನಿವಾರ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.

Mangalore Today | Latest main news of mangalore, udupi - Page  Fishermen-to-get-Kisan-Credit-Cards-shortly-Kota-Srinivas-Poojary

ಹೈಕೋರ್ಟ್ ಏನು ಹೇಳಿದೆ, ಅದಕ್ಕೆ ನಮ್ಮ ಬದ್ಧತೆ ಇದೆ. ಸಂವಿಧಾನದ ಆಶಯದಂತೆ ಕೋರ್ಟ್ ತೀರ್ಪಿನಂತೆ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಸರ್ಕಾರ ಆದೇಶ ಕೊಟ್ಟಿದೆ. ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಂಡಿದೆ ಎಂದರು. ಕೆಲವರು ಮತೀಯವಾದ ಇಟ್ಟುಕೊಂಡು ರಾಷ್ಟ್ರೀಯವಾದಕ್ಕೆ ಸವಾಲು ಹಾಕುವಂತಹ ವಿಚಾರ ತಾವೆಲ್ಲಾ ಕೇಳಿದ್ದೀರಿ. ಇದನ್ನು ಸ್ಪಷ್ಟವಾಗಿ ನಿಯಂತ್ರಣಕ್ಕೆ ತರುತ್ತೇವೆ. ಇದನ್ನು ಓದಿ :- ಸಿದ್ದಾಪುರ ಕೆರೆಯಲ್ಲಿ ಈಜಲು ಹೋಗಿ ಯುವಕ ಸಾವು

Mass marriage scheme Saptapadi in all temples: Minister Kota Srinivas  Poojary

ಯಾರೂ ಕೂಡಾ ಕಾನೂನಿಗಿಂತ ಮೇಲಲ್ಲ. ನಮ್ಮ ವ್ಯವಸ್ಥೆಗಳು, ಆಚರಣೆಗಳು, ಆಲೋಚನೆಗಳು, ನಂಬಿಕೆಗಳು ನಮ್ಮ ಚೌಕಟ್ಟಿನಲ್ಲಿ ಸಾಂಪ್ರದಾಯಿಕವಾಗಿ, ಖಾಸಗಿಯಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ. ಇದನ್ನು ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಕಾನೂನಿಗೆ ಪೂರಕವಾದ ವಾತಾವಣವನ್ನು ಒದಗಿಸುತ್ತೇವೆ. ಕಾನೂನಿಗೆ ಸೆಡ್ಡು ಹೊಡೆಯುವವರನ್ನು ನಿಯಂತ್ರಣ ಮಾಡುವ ಅಧಿಕಾರ ಇದೆ. ಅದನ್ನೂ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ :-  ಧರ್ಮ ಇರೋವರೆಗೂ ಧರ್ಮ ಯುದ್ಧ ನಡೆಯುತ್ತೆ – ಬಿ.ಸಿ ಪಾಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!