ರಾಜ್ಯದಲ್ಲೂ ಮಾಸ್ಕ್ ರದ್ದು ಮಾಡೋ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಈ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ಡಾ. ಸುಧಾಕರ್ ಚರ್ಚೆ ನಡೆಸಿದ್ದಾರೆ.
ಕೋವಿಡ್ ಇಳಿಮುಖ ಹಿನ್ನೆಲೆಯಲ್ಲಿ ಮಹಾರಾಷ್ಟ್ರ , ದೆಹಲಿ, ಹರಿಯಾಣದಲ್ಲಿ ಮಾಸ್ಕ್ ರದ್ದು ಮಾಡಲಾಗಿದೆ. ಕರ್ನಾಟಕದಲ್ಲೂ ಕೋವಿಡ್ ಇಳಿಮುಖವಾಗುತ್ತಿದೆ. ನಿನ್ನೆ ಕೇವಲ 50 ಪ್ರಕರಣ ದಾಖಲಾಗಿದೆ. ಹೀಗಾಗಿ ಸರ್ಕಾರ ಮಾಸ್ಕ್ ಧರಿಸುವ ಕಡ್ಡಾಯ ಆದೇಶ ಹಿಂಪಡೆಯೋ ಸಾಧ್ಯತೆ ಇದೆ. ಸಿಎಂ ಬೊಮ್ಮಾಯಿ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು, ತಜ್ಞರ ಜೊತೆ ಚರ್ಚೆ ನಡೆಸಿ ಕಡ್ಡಾಯ ಆದೇಶ ಹಿಂಪಡೆಯೋ ಸಾಧ್ಯತೆ ಇದೆ.
ಇದನ್ನು ಓದಿ :-ಬೆಳಗಾವಿ ಜಿಲ್ಲೆ ವಿಭಜನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ – ಕತ್ತಿಗೆ ಬೆಂಬಲ ಘೋಷಣೆ