ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಠಿಸಿರುವ ಹೊಂಬಾಳೆ ಫಿಲ್ಮ್ಸ್’ ಹೊಸ ಹೆಜ್ಜೆ ಇಟ್ಟಿದೆ. ಯಶ್ ನಟನೆಯ ಕೆಜಿಎಫ್, ಕೆಜಿಎಫ್ 2, ಪ್ರಭಾಸ್ ನಟನೆಯ
ಸಲಾರ್’ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಬ್ಯಾನರ್ ಹೊಸ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಕೈ ಜೋಡಿಸಿದೆ.
ಮೊದಲ ಬಾರಿಗೆ ಐಪಿಎಲ್ ಕ್ರಿಕೆಟ್ ಟೀಂ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಸಾಥ್ ಕೊಟ್ಟಿದೆ. ಈ ಮೂಲಕ ಹೊಸ ರೀತಿಯ ಮನರಂಜನೆ ನೀಡಲು ಹೊಂಬಾಳೆ ಫಿಲ್ಮ್ಸ್ ರೂವಾರಿ ವಿಜಯ್ ಕಿರಗಂದೂರು ಪ್ಲ್ಯಾನ್ ಮಾಡಿದ್ದಾರೆ. ಚಿತ್ರ ನಿರ್ಮಾಣದ ಮೂಲಕ ಸಂಚಲನ ಮೂಡಿಸುತ್ತಿರೋ `ಹೊಂಬಾಳೆ ಫಿಲ್ಮ್ಸ್’ ಕ್ರಿಕೆಟ್ನಲ್ಲಿಯೂ ಸದ್ದು ಮಾಡಲು RCB ಜೊತೆ ಸೇರಿಕೊಂಡಿದೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಈ ಮುಂಚೆಯೇ ಸೋಷಿಯಲ್ ಮೀಡಿಯಾ ಮೂಲಕ 11.15ಕ್ಕೆ ಅನೌನ್ಸ್ ಮೆಂಟ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಪೋಸ್ಟ್ ಮಾಡಿತ್ತು. ಅದರಂತೆಯೇ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ.
ಇದನ್ನು ಓದಿ : – ಚಿರು ಕೊನೆಯ ಸಿನಿಮಾದಲ್ಲಿ ರಾಯನ್ ಸರ್ಜಾ