ತರಗತಿಗಳಲ್ಲಿ ಹಿಜಾಬ್ (HIJAB) ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (SUPREMECOURT) 2ನೇ ಬಾರಿಯೂ ತುರ್ತು ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದೆ.
ತರಗತಿಗಳಲ್ಲಿ ಹಿಜಾಬ್ (HIJAB) ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (SUPREMECOURT) 2ನೇ ಬಾರಿಯೂ ತುರ್ತು ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದೆ. ಇಂದು ಬೆಳಗ್ಗೆ 10:30ಕ್ಕೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿದ್ಯಾರ್ಥಿನಿ ಆಯಿಷಾ ಪರ ವಕೀಲ ದೇವದತ್ ಕಾಮತ್ ತುರ್ತು ಅರ್ಜಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಮಣ ಪೀಠದಲ್ಲಿ ಮನವಿ ಮಾಡಿದರು.
ಇದೇ 28 ರಿಂದ ಪರೀಕ್ಷೆ ಆರಂಭವಾಗಲಿದೆ. ಶಾಲೆಯಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ 1 ವರ್ಷ ಹಾಳಾಗುತ್ತದೆ. ಹಾಗಾಗಿ ಶೀಘ್ರ ವಿಚಾರಣೆ ನಡೆಸಬೇಕು ಎಂದು ಅವರು ವಾದಿಸಿದರು. ಇದಕ್ಕೆ ಅಸಮಧಾನಗೊಂಡ ಸಿಜೆಐ ರಮಣ(CJI RAMANA) ಪ್ರಕರಣಕ್ಕೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಸಮಸ್ಯೆಯನ್ನು ಸೂಕ್ಷ್ಮಗೊಳಿಸಬೇಡಿ ಎಂದು ಹೇಳಿ ಮನವಿಯನ್ನು ತಿರಸ್ಕರಿಸಿ ಮತ್ತೊಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡರು. ಈ ಹಿಂದೆಯೇ ತುರ್ತು ವಿಚಾರಣೆ ಕೈಗೊಳ್ಳುವಂತೆಯೂ ಮನವಿ ಮಾಡಿದಾಗ ಹೋಳಿ ಹಬ್ಬದ ರಜೆಯ ಬಳಿಕ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು.ಇದನ್ನು ಓದಿ ;-RENUKACHARYA – ರೇಣುಕಾಚಾರ್ಯ ಮಗ ಮಗಳಿಗೆ ಎಸ್ ಸಿ ಸರ್ಟಿಫಿಕೇಟ್ ಕೊಡಿಸಿದ್ದಾರೆ – ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ
ಏನಿದು ಹಿಜಾಬ್ ವಿವಾದ
ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಜನವರಿ 1ರಂದು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು 6 ವಿದ್ಯಾರ್ಥಿನಿಯರು ಆರೋಪಿಸಿದಾಗ ಹಿಜಾಬ್ ವಿವಾದ ಬೆಳಕಿಗೆ ಬಂತು. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ್ದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಲು ಕಾಲೇಜಿನ ಬಳಿ ಅನುಮತಿ ಕೇಳಲಾಗಿದೆ. ಆದರೆ ಕಾಲೇಜು ಅಧಿಕಾರಿಗಳು ಹಿಜಾಬ್ ಧರಿಸಿ ಹಾಗೂ ಮುಖ ಮುಚ್ಚಿಕೊಂಡು ತರಗತಿಗೆ ಪ್ರವೇಶಿಸಲು ನಿರಾಕರಿಸಿದರು ಎಂದು ಹೇಳಿದ್ರು.
ಬಳಿಕ, ಈ ವಿದ್ಯಾರ್ಥಿನಿಯರು ಕಾಲೇಜು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ರು. ಒಂದು ಕಾಲೇಜಿನಿಂದ ಆರಂಭವಾದ ಈ ವಿವಾದ, ಶೀಘ್ರದಲ್ಲೇ ರಾಜ್ಯವ್ಯಾಪಿ ಹರಡಿ ದೊಡ್ಡ ಸಮಸ್ಯೆಯಾಗಿ ಬದಲಾಯಿತು.
ಬಳಿಕ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಇದೀಗ ಸುಪ್ರೀಂ ಅಂಗಳಲ್ಲಿ ಈ ಪ್ರಕರಣ ಬಂದು ನಿಂತಿದೆ.
ಇದನ್ನು ಓದಿ ;- JAMES FILM – ಜೇಮ್ಸ್ ಸಿನಿಮಾ ವಿವಾದದ ಬಗ್ಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದೇನು ಗೊತ್ತಾ..?