ಸಿಖ್ ಗುರು ತೇಗ್ ಬಹುದ್ದೂರ್ 400ನೇ ಜನ್ಮದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪುಕೋಟೆಯಲ್ಲಿ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದರು. ನಂತರ ಗುರುಗಳ ತ್ಯಾಗದಿಂದ ಭಾರತ ಸಂಪ್ರದಾಯಗಳ ಬೀಡಾಗಿದೆ.
ಭಾರತವನ್ನು ಕಟ್ಟುವುದಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಕರೆಕೊಟ್ಟರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರುಗಳ ಆರ್ಶೀವಾದದಿಂದ ಅವರ ಆದರ್ಶನವನ್ನು ದೇಶದ ಜನರು ಮುಂದುವರಿಸುತ್ತಿರುವುದು ತುಂಬಾ ಸಂತೋಷ ತರುತ್ತಿದೆ. ಈ ಶುಭ ಸಮಯದಲ್ಲಿ ನಾನು ಎಲ್ಲ 10 ಗುರುಗಳ ಪಾದಕ್ಕೆ ನಮನವನ್ನು ಸಲ್ಲಿಸುತ್ತಿದ್ದೇನೆ. ಈ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನು ಹೃದಯ ತುಂಬಿ ಅಭಿನಂದಿಸುತ್ತಿದ್ದೇನೆ ಎಂದರು.
ಮೊಘಲ್ ದೊರೆ ಔರಂಗಜೇಬ್ನ ನಿರಂಕುಶ ಚಿಂತೆನೆಗಳಿಗೆ ಎದೆಯೊಡ್ಡಿದ ಗುರು ತೇಜ್ ಬಹಾದ್ದೂರ್, ಭಾರತದ ಆದರ್ಶಗಳ ರಕ್ಷಣೆಗೆ ಬಂಡೆಯಂತೆ ನಿಂತರು. ಔರಂಗಜೇಬ್ ನೂರಾರು ತಲೆಗಳನ್ನು ಕತ್ತರಿಸಿದರೂ, ಗುರು ತೇಜ್ ಬಹಾದ್ದೂರ್ ಅವರ ನಂಬಿಕೆಯನ್ನು ಆತನಿಂದ ಅಲುಗಾಡಿಲು ಸಾಧ್ಯವಾಗಲಿಲ್ಲ. ಆಧುನಿಕ ಭಾರತ ಕೂಡ ಗುರುಗಳ ಆಶೀರ್ವಾದದಿಂದ ಇಂತದ್ದೇ ಛಾತಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಕಾರ್ಯಕ್ರಮಕ್ಕೆ ಬಂದು ನನಗೆ ಯಾವ ರೀತಿಯ ಶಾಂತಿ ಸಿಕ್ಕಿದೆ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಸ ಚಿಂತನೆ, ನಿರಂತರ ಶ್ರಮ ನಮ್ಮ ಸಿಖ್ ಧರ್ಮದ ಗುರುತು. ಇಂದು ಭಾರತವು ತನ್ನ ಗುರುಗಳ ಆದರ್ಶಗಳೊಂದಿಗೆ ಮುಂದೆ ನಡೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕೆಂಪು ಕೋಟೆ ವಿಶೇಷ, ಶ್ರೇಷ್ಠ ದಿನಗಳ ಆಚರಣೆಗೆ ಸಾಕ್ಷಿಯಾಗಿದೆ. ಇಂದು ಗುರು ತೇಜ್ ಬಹುದ್ದೂರ್ ಅವರ ಹುತಾತ್ಮತೆಯ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಹೆಮ್ಮೆ ತರುತ್ತಿದೆ ಎಂದರು.
ಇದನ್ನು ಓದಿ :– ಆದೇಶ ಕೊಟ್ಟರೂ ಪುಡಿಗಟ್ಟಿದ ಬುಲ್ಡೋಜರ್ ! ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ