ರಾಯಚೂರು (Raichur) ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಜನರ ನಿದ್ದೆಗೆಡಿಸಿದ್ದ ಚಿರತೆ (Leopard) ಯನ್ನು 8 ತಿಂಗಳ ಬಳಿಕ ಸೆರೆ ಹಿಡಿದಿದ್ದಾರೆ.
2 ಮೇಕೆ ಹಾಗೂ 1 ಹಸುವನ್ನ ಚಿರತೆ ಕೊಂದು ತಿಂದಿತ್ತು. ಗ್ರಾಮದ ಪಕ್ಕದಲ್ಲೇ ಇದ್ದ ಗುಡ್ಡದಲ್ಲಿ ಚಿರತೆ ಅವಿತುಕೊಂಡಿತ್ತು. ನೀರಮಾನ್ವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಚಿರತೆಯಿಂದಾಗಿ ಆತಂಕಕ್ಕೆ ಒಳಗಾಗಿದ್ದರು. ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯಿಂದ 3 ಬೋನ್ ಗಳನ್ನ ಅಳವಡಿಸಲಾಗಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದೆ. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೇಶ್ ನೇತೃತ್ವದಲ್ಲಿ ಹುಲಿಯ ಕಾರ್ಯಚರಣೆ ನಡೆದಿದೆ.
ಇದನ್ನೂ ಓದಿ : – 2023ಕ್ಕೆ ಮತ್ತೆ ಹೆಚ್ ಡಿಕೆ ಸಿಎಂ ಆಗುವುದು ಅಷ್ಟೇ ಸತ್ಯ – ಶರವಣ