ನಾಯಿಮರಿಯಿಂದ ಹುಟ್ಟಿತು ಹರಿಪ್ರಿಯ – ವಸಿಷ್ಠ ನಡುವಿನ ಪ್ರೇಮ

ನಟಿ ಹರಿಪ್ರಿಯಾ ( HARIPRIYA ) ಹಾಗೂ ನಟ ವಸಿಷ್ಠ ಸಿಂಹ ( VASISTA SIMHA )ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿದೆ.  ಇಬ್ಬರ ನಡುವಿನ ಪ್ರೀತಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಹರಿಪ್ರಿಯಾ ಮೂಗು ಚುಚ್ಚವ ಶಾಸ್ತ್ರದ ವಿಡಿಯೋ ವೈರಲ್ ಆದ ನಂತರವಷ್ಟೇ ಇವರ ಲವ್ ಸ್ಟೋರಿ ಹೊರಬಂತು. ಅಚ್ಚರಿ ಎಂದರೆ, ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವೆ ಪ್ರೀತಿ ಶುರುವಾಗಲು ಕಾರಣ ಆಗಿದ್ದು ಒಂದು ನಾಯಿಮರಿ ಈ ವಿಚಾರವನ್ನು ಸ್ವತಃ ಹರಿಪ್ರಿಯಾ ಬಯಲು ಮಾಡಿದ್ದಾರೆ. ತಮ್ಮ ಲವ್ ಶುರುವಾಗಿದ್ದು ಹೇಗೆ ಎಂಬುದನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

View this post on Instagram

A post shared by Hariprriya (@iamhariprriya)

ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸುತ್ತಿದ್ದಾರೆ. ಆ ಚಿತ್ರದ ಸೆಟ್ನಲ್ಲಿ ಸಲುಗೆ ಬೆಳೆದು ಇಬ್ಬರ ನಡುವೆ ಪ್ರೀರಿ ಚಿಗುರಿತು ಅಂತ ಕೆಲವರು ಊಹಿಸಿದ್ದುಂಟು. ಆದರೆ ಅಸಲಿ ಕಹಾನಿ ಏನು ಎಂಬುದನ್ನು ಹರಿಪ್ರಿಯಾ ತೆರೆದಿಟ್ಟಿದ್ದಾರೆ. ವಸಿಷ್ಠ ಸಿಂಹ ನೀಡಿದ ನಾಯಿಮರಿಯಿಂದ ಇವರ ಪ್ರೇಮ್ ಕಹಾನಿ ಶುರುವಾಯಿತು. ಆ ಶ್ವಾನದ ಹೆಸರು ಕ್ರಿಸ್ಟಲ್. ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ನಾಯಿಗಳನ್ನು ಸಾಕಿದ್ದರು. ಆದರೆ ಲಕ್ಕಿ ಸತ್ತ ನಂತರ ಹ್ಯಾಪಿ ಒಂಟಿಯಾಯ್ತು. ಹರಿಪ್ರಿಯಾ ಕೂಡ ಲಕ್ಕಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದರು. ‘ಹ್ಯಾಪಿ ಮತ್ತು ಕ್ರಿಸ್ಟಲ್ ನಡುವೆ ಸ್ನೇಹ ಬೆಳೆಯಲು ಸ್ವಲ್ಪ ಸಮಯ ಹಿಡಿಯಿತು. ಕ್ರಿಸ್ಟಲ್ ಯಾವಾಗಲೂ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡ್ತಿದ್ದ. ಅದರಿಂದ ಹ್ಯಾಪಿಗೆ ಸಿಟ್ಟು ಬರ್ತಿತ್ತು. ಕ್ರಿಸ್ಟಲ್ ಮೋಡಿ ಮಾಡ್ತಾನೆ. ಯಾರನ್ನು ಬೇಕಾದ್ರೂ ಬೇಗ ಫ್ರೆಂಡ್ ಮಾಡಿಕೊಳ್ತಾನೆ. ಹ್ಯಾಪಿ ಜೊತೆಗೂ ಫ್ರೆಂಡ್ಶಿಪ್ ಬೆಳೆಸಿಕೊಂಡ. ಈಗ ಅವರಿಬ್ಬರೂ ಜೊತೆಯಲ್ಲೇ ಇರ್ತಾರೆ’ ಎಂದು ಹರಿಪ್ರಿಯಾ ಹೇಳಿದ್ದಾರೆ. ‘ಇವತ್ತು ನಿಮಗೊಂದು ಸೀಕ್ರೆಟ್ ಹೇಳ್ತೀನಿ. ವಸಿಷ್ಠ ಈ ನಾಯಿಯನ್ನು ಗಿಫ್ಟ್ ಮಾಡಿದಾಗ ಇವನು ಒಂದು ಮೆಸೇಜ್ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್ ಶೇಪ್ನ ಒಂದು ಬರ್ತ್ ಮಾರ್ಕ್ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ’ ಎಂದಿದ್ದಾರೆ ಹರಿಪ್ರಿಯಾ.

ಇದನ್ನೂ ಓದಿ : –  ನನ್ನ ಮುಲ್ಲಾ ಅಂತ ಕರೆಯೋಕ್ಕಾಗಲ್ಲ ಹಿಂದೂ ಹುಲಿ ಅಂತಾನೇ ಕರೆಯಬೇಕು – ಸಿ.ಟಿ ರವಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!