ಈಗಾಗಲೇ ಲೌಡ್ ಸ್ಪೀಕರ್ ಗೆ ಸಂಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲರೂ ಆ ನಿಯಮ ಪಾಲನೆ ಮಾಡಬೇಕು. ಮಂದಿರ ಇರಬಹುದು, ಮಸೀದಿ ಇರಬಹುದು ನಿಯಮ ಪಾಲನೆ ಮಾಡಬೇಕು.
ಮೊದಲೇ ಕ್ರಮ ಕೈಗೊಳ್ಳಬೇಕಿತ್ತು ಆಗ ಆಗಿರಲಿಲ್ಲ ಈಗ ನೋಟಿಸ್ ಹೋಗಿದೆ ಎಂದು ಸಚಿವೆ ಶಶಿಕಲಾ ಜೊಲೆ (SHASHIKALA JOLLE ) ತಿಳಿಸಿದ್ದಾರೆ .ಪೊಲೀಸ್ ಇಲಾಖೆ, ಪರಿಸರ ಇಲಾಖೆ ಕ್ರಮ ಕೈಗೊಳ್ಳಲಿದೆ .ಈ ನಿಯಮ ನಮ್ಮ ದೇವಸ್ಥಾನಗಳಿಗೂ ಅನ್ವಯವಾಗುತ್ತದೆ .ರಾತ್ರಿ- ಹಗಲು ನಿರ್ದಿಷ್ಟ ಅವಧಿಯಲ್ಲಿ ಮೈಕ್ ಹಾಕಬೇಕು. ಒಂದುವೇಳೆ ಪಾಲನೇ ಆಗಿಲ್ಲ ಅಂದ್ರೆ ತಪ್ಪಾಗುತ್ತದೆ . ಇದನ್ನೂ ಓದಿ : – 8 ಕೋಟಿ ವಂಚಿಸಿ ಓಡಿ ಹೋದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ- ಕಾಂಗ್ರೆಸ್ ನಾಯಕರ ವಿರುದ್ಧ ರಮ್ಯಾ ಕಿಡಿ
ದೇವಸ್ಥಾನ, ಮಸೀದಿಗಳಿಗೆ ನಿರ್ಧಿಷ್ಟ ಶಬ್ದ ಮಾಡುವ ಸ್ಪೀಕರ್ ಬಳಕೆಗೆ ಸೂಚನೆ ನೀಡಿದ್ದೇವೆ. ಸರ್ಕಾರ ಮಾಡಿರೋ ನಿಯಮವನ್ನು ಎಲ್ಲರು ಪಾಲನೆ ಮಾಡಬೇಕು. ಈಗಾಗಲೇ ಆದೇಶ ಮಾಡಿದರು ನಿಯಮ ಪಾಲನೆ ಆಗಿರಲಿಲ್ಲ.ಈಗ ನೋಟೀಸ್ ಜಾರಿ ಮಾಡಿದ ಬಳಿಕ ಅನ್ವಯ ಆಗಲಿದೆ. ಸರ್ಕಾರ ಮಾಡಿರೋ ಆದೇಶ ಎಲ್ಲಾ ದೇವಸ್ಥಾನಗಳಿಗೂ ಅನ್ವಯ ಆಗಲಿದೆ. ಈವರೆಗೂ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ – ಪ್ರಯಾಣಿಕರು ಫುಲ್ ಖುಷ್