ಜೀವ ಬೆದರಿಕೆ ಸಂದೇಶ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಕೋರ್ಟ್ ಗೆ ಪ್ರಮೋದ್ ಮುತಾಲಿಕ್ ( PROMOD MUTHALIK ) ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನ್ನ ದೂರನ್ನ ಪೊಲೀಸ್ ಠಾಣೆಯಲ್ಲಿ ನಾನ್ ಕಾಗ್ನಿಜೆಬಲ್ ಎಂದು ಮಾಡಲಾಗಿತ್ತು. ನಿನ್ನೆ ಧಮ್ಕಿ ವಿಚಾರವಾಗಿ ಧಾರವಾಡ ( DHARAWAD ) ಉಪನಗರ ಠಾಣೆಯಲ್ಲಿ ದೂರು ನೀಡಿ, ಇವತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ.
ನ್ಯಾಯಾಲಯ ದೂರು ದಾಖಲಿಸಿಕೊಳ್ಳಲು ಅನುಮತಿ ಕೊಟ್ಟಿದೆ . ತನಿಖೆ ಮಾಡಲು ಆದೇಶ ಕೊಟ್ಟಿದೆ. ಈಗ ಉಪನಗರ ಠಾಣೆಯವರು ಮುಂದಿನ ಕ್ರಮ ಕೈಗೊಳ್ಳಬೇಕು. ನನಗೆ ಧಮ್ಕಿಯ ಆಡಿಯೋ ಕಳಿಸಿದವನು ಪುತ್ತೂರಿನ ಆಸೀಫ್ ಎಂಬ ಮುಸ್ಲಿಂ ಎಂದು ಗೊತ್ತಾಗಿದೆ ಎಂದು ಹೇಳಿದ್ರು.
ಇದನ್ನೂ ಓದಿ : – ಕನ್ನಡದ `ಕಾಂತಾರ’ ಇಂದು ತುಳು ಭಾಷೆಯಲ್ಲಿ ರಿಲೀಸ್