ಜುಲೈ 12 ರಂದು ಚಿಕ್ಕಮಗಳೂರಿನ ( CHIKKAMAGALURU ) ಉಂಡೇದಾಸರಹಳ್ಳಿ ರಾಜ ಕಾಲುವೆಯಲ್ಲಿ ಚಿಂದಿ ಆಯಲು ಹೋಗಿ ರಾಜಕಾಲುವೆಯಲ್ಲಿ ವ್ಯಕ್ತಿ ಕೊಚ್ಚಿ ಹೋದ ಪ್ರಕರಣ ನಗೆಪಾಟಲೀಗಿಡಾಗಿದೆ.
ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ನಗರದ ಐಜಿ ರಸ್ತೆಯಲ್ಲಿ ಬಿಂದಾಸ್ ಓಡಾಟ ಮಾಡುತ್ತಿದ್ದಾರೆ. ಕೊಚ್ಚಿ ಹೋಗಿದ್ದ ವ್ಯಕ್ತಿಯ ಓಡಾಟ ಕಂಡು ಅಧಿಕಾರಿಗಳು ದಂಗಾಗಿದ್ದಾರೆ. ಅಧಿಕಾರಿಗಳಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಪೀಕಲಾಟ ತಂದಿದ್ದ ವ್ಯಕ್ತಿಯು 14 ದಿನಗಳ ಬಳಿಕ ನಗರದಲ್ಲಿ ಪ್ರತ್ಯಕ್ಷವಾಗಿ ಓಡಾಡುತ್ತಿದ್ದಾರೆ. ಇದನ್ನೂ ಓದಿ : – ಬೆಳಗಾವಿಯಲ್ಲಿ ಸಾರಿಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಮಳೆಯ ನಡುವೆಯೇ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ರು. ಅಧಿಕಾರಿಗಳಿಗೆ ಪೀಕಲಾಟ ತಂದಿದ್ದ ವ್ಯಕ್ತಿಯನ್ನ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ( VENUGOPAL )ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : – ಮಂಗಳೂರಿನ ಪಬ್ ನಲ್ಲಿ ವಿದ್ಯಾರ್ಥಿಗಳ ಮೋಜುಪಾರ್ಟಿಗೆ ಭಜರಂಗದಳದಿಂದ ತಡೆ