ಕೋವಿಡ್ ( covied ) ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಧಾವಂತದಲ್ಲಿ ಅಂತಾರಾಷ್ಟ್ರೀಯ ಔಷಧ ತಯಾರಿಕಾ ಸಂಸ್ಥೆ ಮಹಾ ಎಡವಟ್ಟೊಂದನ್ನು ಮಾಡಿದೆ. ಜನರ ಬಳಕೆಗೂ ಮುನ್ನ ಫೈಜರ್ ಸಂಸ್ಥೆ ತನ್ನ ಕೋವಿಡ್ ಲಸಿಕೆಯ ಪರೀಕ್ಷೆಯನ್ನೇ ನಡೆಸಿರಲಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಅಂತಾರಾಷ್ಟ್ರೀಯ ಔಷಧ ತಯಾರಿಕಾ ಸಂಸ್ಥೆ ಫೈಜರ್ ತನ್ನ ಕೋವಿಡ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅದರ ಪರೀಕ್ಷೆಯನ್ನೇ ನಡೆಸಿರಲಿಲ್ಲ ಎನ್ನಲಾಗಿದೆ. ಜಗತ್ತಿನಲ್ಲಿ ಲಭ್ಯವಿರುವ ವಿವಿಧ ಕೋವಿಡ್ ಲಸಿಕೆಗಳಲ್ಲಿ ಪ್ರಮುಖವಾಗಿರುವ ಫೈಜರ್ ಲಸಿಕೆಯನ್ನು ಮಾರುಕಟ್ಟೆಗೆ ಅಥವಾ ಜನರ ಬಳಕೆಗೆ ಬಿಡುವ ಮುನ್ನ ಯಾವುದೇ ಪರೀಕ್ಷೆಯನ್ನು ನಡೆಸಿರಲಿಲ್ಲ ಎಂದು ಸ್ವತಃ ಫೈಜರ್ ಕಂಪನಿಯ ಹಿರಿಯ ಅಧಿಕಾರಿ ಜನೈನ್ ಸ್ಮಾಲ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ :- Canara Bank- 1,29,000 ಕೋಟಿ ಸಾಲ ವಸೂಲು ಮಾಡಲಾಗದ ಕೆನರಾ ಬ್ಯಾಂಕ್, ಸುಸ್ತಿದಾರರ ಹೆಸರು ಬಹಿರಂಗಪಡಿಸಿಲ್ಲ ಯಾಕೆ..?
ಯುರೋಪಿಯನ್ ಸಂಸತ್ತಿನಲ್ಲಿ ನಡೆದ ಕೋವಿಡ್ ವಿಚಾರಣೆಯಲ್ಲಿ, ಫೈಜರ್ ಕಂಪನಿಯ ಹಿರಿಯ ಅಧಿಕಾರಿ ಜನೈನ್ ಸ್ಮಾಲ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೋವಿಡ್ ಹರಡದಂತೆ ಲಸಿಕೆ ತಡೆಯುತ್ತದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಾರುಕಟ್ಟೆಗೆ ಬಿಡುವ ಮುನ್ನ ನಾವು ಪರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಇದು ನೀವೂ ಹಾಕಿಸಿಕೊಂಡ ಇತರೆ ಲಸಿಕೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿದೆ.
ಇದನ್ನೂ ಓದಿ :- ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್ ನವರು ತತ್ತರಿಸಿ ಹೋಗಿದ್ದಾರೆ – ಸಿಎಂ ಬೊಮ್ಮಾಯಿ