ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.

4 MNS Workers Held for Playing 'Hanuman Chalisa' on Loudspeaker Outside  Sena Bhavan in Mumbai

ಈ ಸಂಬಂಧ ರಾಜ್ಯ ಸರ್ಕಾರದ ಮೂಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಎಸ್‌. ಬೊಮ್ಮಾಯಿ ಅವರು, ಈ ಕುರಿತು ತೀರ್ಮಾನಕ್ಕೆ ಬರುವ ಸಲುವಾಗಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿ ಹಾಗೂ ಐಜಿಪಿ, ಹೆಚ್ಚುವರಿ ಅಡ್ವೊಕೇಟ್ ಜನರಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದ್ದರು. ಇದನ್ನೂ ಓದಿ : – ಕೊನೆಗೂ ಘೋಷಣೆಯಾಯ್ತು ಬಿಬಿಎಂಪಿ ಎಲೆಕ್ಷನ್ – ಸುಪ್ರೀಂ ಕೋರ್ಟ್ ಮುಹೂರ್ತ ಫಿಕ್ಸ್ !

ತಂಗಿಗೆ ತಾಳಿ ಕಟ್ಟಿದ ಅಣ್ಣ! ಮುಖ್ಯಮಂತ್ರಿ ಸಾಮೂಹಿಕ ವಿವಾಹದಲ್ಲಿ ಸಿಕ್ಕಿಬಿದ್ದ ನಕಲಿ  ಜೋಡಿ ! - Hosakananda


ಈ ಸಂದರ್ಭದಲ್ಲಿ ಧ್ವನಿವರ್ಧಕಗಳ ಬಳಕೆ ಬಗ್ಗೆ ಸುಪ್ರೀಕೋರ್ಟ್‌ ಹೊರಡಿಸಿರುವ ಆದೇಶ, ರಾಜ್ಯ ಸರ್ಕಾರವು ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ರೂಪಿಸಿರುವ ನಿಯಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಳಿಕ ಇಲ್ಲಿ ಹೇಳಿರುವ ಅಂಶಗಳನ್ನು ಜಾರಿಗೆ ತರಲು ಮುಖ್ಯಮಂತ್ರಿ ಬಸವರಾಜ ಎಸ್.‌ ಬೊಮ್ಮಾಯಿ ಆದೇಶ ನೀಡಿದ್ದಾರೆ.
ಶಬ್ದ ಮಾಲಿನ್ಯ(ನಿಯಂತ್ರಣ ಮತ್ತು ನಿಯಂತ್ರಣ) ನಿಯಮಗಳು, 2000, ನಿಯಮ 3(1) ಅಡಿಯಲ್ಲಿ. ಹೇಳಿರುವಂತೆ ‘ಹಗಲಿನ ಸಮಯ’ ಎಂದರೆ ಬೆಳಗ್ಗೆ 6.00 ರಿಂದ ಬೆಳಗ್ಗೆ 10.00 ರವರೆಗೆ ಬಳಸಬಹುದು ಮತ್ತು ರಾತ್ರಿಯ ಸಮಯ ಎಂದರೆ ರಾತ್ರಿ 10.00 ರಿಂದ ಬೆಳಗ್ಗಿನ ಜಾವ 6.00 ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಉಳಿದ ಸಮಯದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು.
ಮಾರ್ಗಸೂಚಿ ಪ್ರಕಾರ ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆದಾರರು 15 ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಪಡೆಯದವರು ಸ್ವಯಂಪ್ರೇರಣೆಯಿಂದ ತೆಗೆದುಹಾಕಬೇಕು ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.

Mumbai MNS Workers Play Hanuman Chalisa Near Mosque Amid Loudspeaker Row -  netional dastak

ಅನುಮತಿ ನೀಡುವ ಪ್ರಾಧಿಕಾರಗಳು: ಎಲ್ಲ ಪೊಲೀಸ್ ಕಮಿಷನರೇಟ್ ಪ್ರದೇಶಗಳಲ್ಲಿ – ಸಹಾಯಕ ಪೊಲೀಸ್ ಕಮಿಷನರ್ ಜುರಿಸ್ಡಿಕ್ಷನಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ. ಇತರ ಪ್ರದೇಶಗಳಲ್ಲಿ ಡಿವೈಎಸ್‌ಪಿ, ತಾಲ್ಲೂಕು ದಂಡಾಧಿಕಾರಿ (ತಹಸೀಲ್ದಾರ್). ಲೌಡ್ ಸ್ಪೀಕರ್‌ಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಆವರಣಗಳಿಗೆ ಇದು ಅನ್ವಯಿಸುತ್ತದೆ. ಇದನ್ನು ತಕ್ಷಣದ ಪರಿಣಾಮದೊಂದಿಗೆ ಕಾರ್ಯಗತಗೊಳಿಸಲು ಅಗತ್ಯವಿರುವ ಸರ್ಕಾರಿ ನಿರ್ದೇಶನಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : – ಮೇ 3ನೇ ವಾರ SSLC ಪರೀಕ್ಷೆ ಫಲಿತಾಂಶ – ಬಿ.ಸಿ ನಾಗೇಶ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!