ಗುರುವಾರವಷ್ಟೇ ದಾಖಲೆಯ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದೆ. ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 81.18ರೂಗೆ ಕುಸಿತವಾಗಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲೇ ಭಾರತ ( india ) ದ ರೂಪಾಯಿ ಮೌಲ್ಯವು 44 ಪೈಸೆ ಕುಸಿದಿದ್ದು, ಅಮೆರಿಕ ಡಾಲರ್ ಎದುರು 81.18 ರೂಕ್ಕೆ ಇಳಿಯುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿದೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಬಲ, ದೇಶೀಯ ಷೇರುಗಳಲ್ಲಿನ ನಕಾರಾತ್ಮಕ ಪ್ರವೃತ್ತಿ ಮತ್ತು ಉಕ್ರೇನ್ನಲ್ಲಿನ ಭೌಗೋಳಿಕ ರಾಜಕೀಯ ಅಪಾಯದ ಹೆಚ್ಚಳವು ದೇಶೀಯ ಕರೆನ್ಸಿಯ ಮೌಲ್ಯ ಕುಸಿತಕ್ಕೆ ಕಾರಣವಿರಬಹುದು ಎನ್ನಲಾಗಿದೆ. ಯುಎಸ್ ಫೆಡರಲ್ ರಿಸರ್ವ್ (US Federal Reserve) ನಿರೀಕ್ಷೆಗಳಿಗೆ ಅನುಗುಣವಾಗಿ ರೆಪೊ ದರವನ್ನು 75 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಅಂತರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ಮೌಲ್ಯವು 81.08ರಂತೆ ವಹಿವಾಟು ಪ್ರಾರಂಭಿಸಿ, 44 ಪೈಸೆ ಕುಸಿತ ಕಂಡು 81.23ರೂಕ್ಕೆ ಇಳಿದು ವಹಿವಾಟು ನಡೆಸುತ್ತಿದೆ.
ಇದನ್ನು ಓದಿ :- ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ಪಿಎಫ್ಐ ಕಚೇರಿಗಳ ಮೇಲೆ ದಾಳಿ ಪ್ರಕರಣ – 14 ಮಂದಿ ಅರೆಸ್ಟ್