ಪತ್ರ ಬರೆದಿಟ್ಟು ಯುವತಿಗೆ ಪರೋಕ್ಷ ಲೈಂಗಿಕ ಕಿರುಕುಳ ಆರೋಪ

ಪತ್ರ (Letter) ಬರೆದು ಲೈಂಗಿಕ ಕಿರುಕುಳಕ್ಕೆ ಅಪರಿಚಿತ ಯತ್ನಿಸಿರುವ ಘಟನೆ ಬೆಂಗಳೂರಿ (Bengaluru) ನ ಕೋಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪತ್ರ (Letter) ಬರೆದು ಲೈಂಗಿಕ ಕಿರುಕುಳಕ್ಕೆ ಅಪರಿಚಿತ ಯತ್ನಿಸಿರುವ ಘಟನೆ ಬೆಂಗಳೂರಿ (Bengaluru) ನ ಕೋಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫ್ಲಾಟ್ ನ ಬಾಗಿಲು ಬಳಿ ಲೆಟರ್ ಇಟ್ಟು, ಕಾಲಿಂಗ್ ಬೆಲ್ ಮಾಡಿ ಅಪರಿಚಿತ ಎಸ್ಕೇಪ್ ಆಗಿದ್ದ. ಡೋರ್ ಓಪನ್ ಮಾಡಿದ್ದ ಯುವತಿಗೆ ಲೆಟರ್ ಕಾಣಿಸಿತ್ತು.

ಲೆಟರ್ ನಲ್ಲಿ ಅಪರಿಚಿತ ಅಸಭ್ಯವಾಗಿ ಬರೆದಿದ್ದ. ನನಗೆ ಸರ್ವೀಸ್ ಕೊಡ್ತೀರಾ..? ಹಾಗಾದ್ರೆ ಬೇಸ್ಮೆಂಟ್ ಗೆ ಬನ್ನಿ. ಒಂದು ದಿನಕ್ಕೆ 50 ಸಾವಿರ ಕೊಡ್ತೀನಿ ಎಂದು ಅಪರಿಚಿತ ಪತ್ರಬರೆದಿಟ್ಟಿದ್ದ.ಕೂಡಲೇ ಯುವತಿ ಅಪಾರ್ಟ್ಮೆಂಟ್ (Apartment) ನ ಸಿಬ್ಬಂದಿ ಗಮನಕ್ಕೆ ವಿಚಾರ ತಿಳಿಸಿ, ಠಾಣೆಗೆ ದೂರು ನೀಡಿದ್ದಾರೆ. ಲೆಟರ್ ಮೂಲಕ ಲೈಂಗಿಕ ಕಿರುಕುಳ ಎಂದು ದೂರು ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ : –  ಹಂಪಿಯ ಪಾರಂಪರಿಕ ತಾಣಗಳಲ್ಲಿ ಇಂದು ವಿದ್ಯುತ್ ದೀಪಲಂಕರ…!

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!