ಬಳ್ಳಾರಿ (Ballari) ಜಿಲ್ಲೆಯಲ್ಲಿ ಹತ್ತು ವಿಧಾನಸಭಾ ಕ್ಷೇತ್ರ ಇದೆ. ನಾವು ಗೆದ್ದಿರೋದು ಐದು ಮಾತ್ರ. ಮುಂದೆ ನಾವು ಹತ್ತಕ್ಕೆ ಹತ್ತು ಗೆಲ್ಲಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS.Yediyurappa) ಹೇಳಿದ್ದಾರೆ. Sc-st ಸಮುದಾಯಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆ ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಸಮಾವೇಶ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಿಎಂ ಬೊಮ್ಮಾಯಿ (Bommai) ಅವರು ಎಸ್ಸಿ ಎಸ್ಟಿ ಗೆ ಮೀಸಲಾತಿ ಹೆಚ್ಚಿಸಿದ್ದಾರೆ. ನಾನು ಸಿಎಂ ಆದಾಗ ವಾಲ್ಮೀಕಿ ಜಯಂತಿ (Valmiki jayanthi) ಮಾಡುವಂತೆ ಮಾಡಿದೆವು. ಕಾಂಗ್ರೆಸ್ (Congress) ಎಸ್ಟಿ ಜನಾಂಗಗಕ್ಕೆ ಏನು ಮಾಡಿಲ್ಲ. ಎಸ್ಟಿ ಜನಾಂಗದ ದ್ರೌಪದಿ ಮುರ್ಮು ಅವರನ್ನ ಈ ದೇಶದ ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ. ಒಂದು ಮಾತನ್ನ ನಿಮಗೆ ನೆನಪು ಮಾಡುವೆ, ನಾನು ಸಿಎಂ ಅದಾಗ ರಾಮುಲು ಜನಾರ್ದನ ರೆಡ್ಡಿ ಕೇಳಿದ ಎಲ್ಲ ಕೆಲಸವನ್ನ ಬಳ್ಳಾರಿಗೆ ಮಾಡಿಕೊಟ್ಟಿದ್ದೇನೆ. ಇದನ್ನೂ ಓದಿ :– ನಮ್ಮ ಸಿಎಂಗೆ ಜೋಡಿ ಗುಂಡಿಗೆ ಇದೆ – ಶ್ರೀಕೃಷ್ಣನಂತೆ ಸಿಎಂ ಕೂಡ ಸುದರ್ಶನ ಚಕ್ರ ಬಿಟ್ಟಿದ್ದಾರೆ – ಶ್ರೀರಾಮುಲು
ಇದನ್ನ ನೆನಪಿನಲ್ಲಿಟ್ಟುಕೊಂಡು ಮುಂದೆ ಹತ್ತಕ್ಕೆ ಹತ್ತು ಕ್ಷೇತ್ರ ಗೆಲ್ಲಿಸಿ. ಈ ಬಾರಿ 100 ಕ್ಕೆ ನೂರು ಎಸ್ಸಿ ಎಸ್ಟಿ ಜನ ನಮ್ಮ ಜೊತೆ ಬರಬೇಕು. ಮತ್ತೊಮ್ಮೆ ಬಿಜೆಪಿಯನ್ನ ಅಧಿಕಾರಕ್ಕೆ ತರುವಂತೆ ನಿರ್ಧಾರ ಮಾಡಿ. ಇವತ್ತು ಈ ಸಮಾವೇಶ ನೋಡಿ ಕಾಂಗ್ರೆಸ್ ಗೆ ಆಘಾತವಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ರು, ನಾವು ಕಾಂಗ್ರೆಸ್ ನವರು ಮೂರು ತಲೆ ಮಾರಿಗೆ ಆಗುವಷ್ಟು ಮಾಡಿದ್ದೇವೆ ಎಂದಿದ್ದರು. 140 ರಿಂದ 150 ಕ್ಷೇತ್ರವನ್ನ ಈ ಬಾರಿ ನಾವು ಗೆಲ್ಲಬೇಕು ಎಂದು ಹೇಳಿದ್ರು.
ಇದನ್ನೂ ಓದಿ :– ಇದು ನಿಜವಾದ ಅಹಿಂದ ಕಾರ್ಯಕ್ರಮ – ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ