ಸರ್ಕಾರದ ವಿರುದ್ಧ ನಾವೇನು ಅಸ್ತ್ರ ಪ್ರಯೋಗಿಸುವಅವಶ್ಯಕತೆ ಇಲ್ಲ. ಜನ ಸರ್ಕಾರವನ್ನು ತೆಗೆಯಬೇಕೆಂದು ತೀರ್ಮಾನ ಮಾಡಿದ್ದಾರೆ. ದಿನ ಜಾಹೀರಾತು ನೀಡುತ್ತಿದ್ದಾರೆ. ಕಳೆದ ಬಾರಿಯ ಬಜೆಟ್ ಜಾರಿಗೆ ಬಂದಿದ್ಯಾ,ಯಾವುದಾದ್ರು ಈಡೇರಿಸಿದ್ದಾರಾ..? ಹಿಂದೆ ಕೊಟ್ಟ ಮಾತು ಈಡೇರಿದ್ಯಾ, ಜನಕ್ಕೆ ಮುಟ್ಟಿದ್ಯಾ? ಬರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K SHIVKUMAR) ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು, ಸಿಕ್ಕಿಂ ವಿವಿಯಲ್ಲಿ ಏನಾಗುತ್ತಿದೆ? ರಸ್ತೆಯಲ್ಲಿ 30 ರಿಂದ 50 ಸಾವಿರ ಅಥವಾ ಲಕ್ಷಕ್ಕೆ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ. ಕಷ್ಟ ಪಟ್ಟು ಓದಿದ ಮಕ್ಕಳ ಪರಿಸ್ಥಿತಿ ಏನಾಗಬೇಕು? ಇದೇನು ಸರ್ಕಾರನಾ ? ಮೈಸೂರಿನಲ್ಲಿ ಏನೇನಾಗಿದೆ, ಯಾವಾವ ಕೇಸ್ ಹೇಗೆ ವರ್ಗಾವಣೆ ಮಾಡಿದರು ಇದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಆ ಬಗ್ಗೆ ಆಮೇಲೆ ಮಾತಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಓದಿ :- ಕಿಲ್ಲರ್ BMTC ಬಸ್ ಗೆ ಮತ್ತೊಬ್ಬರು ಬಲಿ, ಮೂವರಿಗೆ ಗಾಯ
ಜೆಡಿಎಸ್ (JDS) ಬಗ್ಗೆ ಫ್ಟ್ ಕಾರ್ನರ್ ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಹೇ ನಾನೇನು ಕುಸ್ತಿ ಆಡ್ಲಾ? ನಾನು ನೀತಿ ಮೇಲೆ ಹೋಗುತ್ತೇನೆ. ಯಾರ ಮೇಲೂ ವೈಯಕ್ತಿಕ ವಿಚಾರ ಇಲ್ಲ.ಜೆಡಿಎಸ್ನವರು ನಮ್ಮ ಪಾರ್ಟಿಗೆ ಸೇರುತ್ತಿದ್ದಾರೆ. ಮಂಡ್ಯ, ಕನಕಪುರದಲ್ಲಿ ಸೇರುತ್ತಿದ್ದಾರೆ. ಜೆಡಿಎಸ್ನವರಿಗೆ ನಾವು ಹೇಳ್ತಾ ಇದ್ದೇವೆ. ನೋಡ್ರಪ್ಪ ಕುಮಾರಣ್ಣ ವಿಸರ್ಜನೆ ಮಾಡುತ್ತೇನೆ ಎಂದು ಹೇಳ್ತಾ ಇದ್ದಾರೆ. ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳುತ್ತಾ ಇದ್ದೇನೆ ಎಂದರು.
ಇದನ್ನು ಓದಿ :- ಇಸ್ರೇಲ್ ನಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ 7 ಮಂದಿ ಬಲಿ 10 ಮಂದಿಗೆ ಗಾಯ…!