ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಬೆಂಗಳೂರಲ್ಲಿ (Bengaluru) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha karandlaje) ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ನಾನು ಕೇಂದ್ರದ ಮಂತ್ರಿ ಆಗಿದ್ದೇನೆ. ದೇಶದ ವಿವಿಧ ಕಡೆ ತೆರಳಿ ಸರ್ಕಾರ ಹಾಗೂ ಇಲಾಖೆಯ ಕೆಲಸ ಮಾಡುತ್ತಿದ್ದೇನೆ. ಪಕ್ಷ ಕೂಡ ವಿವಿಧ ರಾಜ್ಯಗಳ ಜವಬ್ದಾರಿ ಕೊಡ್ತಿದೆ. ನಾನು ಕೂಡ ಪಕ್ಷ ಏನು ಹೇಳುತ್ತೋ ಅದರಂತೆ ಕೆಲಸ ಮಾಡ್ತಿದ್ದೇನೆ. ಈ ರೀತಿಯ ಆಧಾರ ರಹಿತ ಚರ್ಚೆಗಳಿಗೆ ಯಾವುದೇ ಆಧಾರ ಇಲ್ಲ ಎಂದು ಶೋಭಾ ಹೇಳಿದ್ದಾರೆ. ಈ ಮೂಲಕ ಮುಂದಿನ ಸಿಎಂ ಶೋಭಾ ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ.ಇದೇ ವೇಳೆ ಪ್ರಧಾನಿ ಮೋದಿ ಬಂದ ಬಳಿಕ ಯಾವುದೇ ದೊಡ್ಡ ಗಲಭೆ ಆಗಿಲ್ಲ. ಸಣ್ಣಪುಟ್ಟ ಸಂಘರ್ಷ ಆಗಿದ್ರೆ, ಅದಕ್ಕೆ ಮೋದಿ ಸರ್ಕಾರ ಕಾರಣ ಅಂತ ಹೇಳಲು ಸಾಧ್ಯವಿಲ್ಲ. ಬೇರೆ ದೇಶಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ, ಅದನ್ನ ನೋಡಿ ಸುಮ್ಮನೆ ಕೂರಲ್ಲ ಎಂದು ತಿಳಿಸಿದ್ದಾರೆ. ಹಿಜಾಬ್ ಕೋಮು ಗಲಭೆ ಅಲ್ಲ ಇದು ಕೆಲ ಸಂಘಟನೆಗಳಾದ PFI, SDPI ಸಂಘಟನೆಗಳ ಷಡ್ಯಂತ್ರವಾಗಿದೆ.
ಖಾದ್ಯತೈಲ, ಗೊಬ್ಬರದಲ್ಲಿ ನಾವು ಸ್ವಾವಲಂಬಿಗಳಾಗಿಲ್ಲ
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ಬೆಲೆ ಹೆಚ್ಚಳದ ಭಾರವನ್ನ ಸರ್ಕಾರ ಹೊತ್ತುಕೊಂಡಿದೆ. ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿಗಳಾಗಿಲ್ಲ. ಇಂಡೋನೇಷ್ಯಾದಿಂದ ಪಾಮ್ ಆಯಿಲ್ ತರಿಸಿ, ಬೇರೆ ಬೇರೆ ಎಣ್ಣೆ ಜೊತೆ ಮಿಕ್ಸ್ ಮಾಡಲಾಗ್ತಿದೆ. ಗೊಬ್ಬರ ವಿಚಾರದಲ್ಲೂ ಕೂಡ ಸ್ವಾವಲಂಬನೆ ಇಲ್ಲ. ಪೊಟಾಷಿಯಂ, ನೈಟ್ರೇಟ್ ಎಲ್ಲವೂ ಆಮದು ಮಾಡಿಸಿಕೊಳ್ಳಲಾಗ್ತಿದೆ ಎಂದು ತಿಳಿಸಿದ್ರು.
ಬಸವಣ್ಣ ಕುವೆಂಪುಗೆ ಅವಮಾನ ಮಾಡಿಲ್ಲ
ಪಠ್ಯ ಪುಸ್ತಕ ವಿಚಾರದಲ್ಲಿ ಬಸವಣ್ಣ, ಕುವೆಂಪು (kuvempu) ಇಬ್ಬರಿಗೂ ಅವಮಾನ ಮಾಡೋ ವಿಚಾರವೇ ಇಲ್ಲ. ಸರ್ಕಾರ ಕುವೆಂಪು ಅವರಿಗೆ ಗೌರವ ಕೊಡ್ತಿದೆ. ಬಸವಣ್ಣ (Basavanna)ಅಂದ್ರೆ ವಿಶೇಷ ಗೌರವ ಇದೆ.ಪ್ರತೀ ಕಾರ್ಯಕ್ರಮದಲ್ಲಿ ಅವರನ್ನ ಪೂಜಿಸಲಾಗ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : – ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿ ಖಾಸಗಿ ಬಸ್ಸು ಅಪಘಾತ- ಜೀವಂತ ದಹಿಸಿದ ಪ್ರಯಾಣಿಕರ ಸಂಖ್ಯೆ 7ಕ್ಕೇರಿಕೆ