ಹುಬ್ಬಳ್ಳಿ ಗಲಾಟೆಯ ಮಾಸ್ಟರ್ ಮೈಂಡ್ ಬಂಧನ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರತಿಕ್ರಿಯೆ ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು ಹು- ಧಾ ಕಮಿಷನರ್ ಪೊಲೀಸ್ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ.
ವಿಡಿಯೋದಲ್ಲಿ ಇರುವ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಗಲಾಟೆಯಲ್ಲಿ ಯಾರೇ ಇದ್ರೂ ಬಿಡುವ ಪ್ರಶ್ನೆಯೇ ಇಲ್ಲ. ಗ್ರಾಫಿಕ್ಸ್ ಮಾಡಿ ಪೋಟೋ ಹಾಕಿದ ವ್ಯಕ್ತಿಯ ಬಂಧನದ ಬಳಿಕವೂ ಗಲಾಟೆ ಮಾಡಿದ್ದಾರೆ. ಪೊಲೀಸರ ಮೇಲೆ ಕಲ್ಲು ಎಸೆದಿದ್ದು, ಪೊಲೀಸ್ ವಾಹನಗಳು ಜಖಂಗೊಳಿಸುವುದು. ಇದನ್ನು ಓದಿ :– ಪೂಜೆ ವೇಳೆ ಶಬ್ದ ಮಾಲಿನ್ಯ ಆರೋಪ – ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ನೊಟೀಸ್
ಹಿಂದೂ ದೇವಸ್ಥಾನ ಪೂರ್ತಿ ಹಾನಿ ಮಾಡುವುದು. ಪೊಲೀಸರನ್ನ ಕಲ್ಲು ಚಪ್ಪಡಿ ಹಾಕಿ ಕೊಂದು ಹಾಕಲು ಯತ್ನಿಸುವುದು. ಇಂತಹ ಸಂಗತಿಗಳು ಸಹಿಸಲು ಸಾಧ್ಯವಿಲ್ಲ. ಸಮಾಜ ವಿದ್ರೋಹಿ ಶಕ್ತಿಗಳು ಯಾರೇ ಇರಲಿ ಅವರನ್ನ ಬಂಧಿಸಿ ಕಾನೂನು ಪ್ರಕಾರ ಅವರಿಗೆ ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ. ಈ ಗಲಾಟೆ ಬಗ್ಗೆ ಸಮಗ್ರ ತನಿಖೆ ಆಗುತ್ತೆ. ಸದ್ಯ ಒಂದು ಮಾಸ್ಟರ್ ಮೈಂಡ್ ಸಿಕ್ಕಿದ್ದಾನೆ.
ಇನ್ನೂ ಎಷ್ಟು ಎಷ್ಟು ಮಾಸ್ಟರ್ ಮೈಂಡ್ ಇದ್ದಾರೆ ಅವರನ್ನು ಹೊರ ತೆಗೆಯುತ್ತೇವೆ. ಎಲ್ಲರನ್ನೂ ಬಂಧಿಸಿ ಅತ್ಯಂತ ಕಟ್ಟೋರ ಕಾನೂನು ಕ್ರಮಕೈಗೊಳ್ಳುತ್ತೇವೆ. ಡಿಜೆ ಹಳ್ಳಿ, ಕೆಜಿಹಳ್ಳಿ ಮಾದರಿ ಗಲಾಟೆಯೇ ನಡೆಯುತ್ತಿತ್ತು ಎಂಬ ಮಾಹಿತಿ ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ಕೊಟ್ಟಿದ್ದಾರೆ. ಮುಂದೆ ಇಂತಹ ಗಲಾಟೆ ಆಗದಂತೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ರು.
ಇದನ್ನು ಓದಿ :– ಅನುಭವಿ ಆರ್ ಅಶೋಕ್ ಗೆ ಒಲಿಯತ್ತಾ ಗೃಹ ಖಾತೆ ?