ಮುಂಗಾರು ಹಂಗಾಮ ಪ್ರಾರಂಭವಾಗಿದ್ದು, ಕೆಲವೆಡೆ ರಸಗೊಬ್ಬರ ಕೊರತೆಯಾಗಿದೆ ಎಂದು ಸುದ್ದಿಯಾಗಿದೆ. ಆದರೆ ಯಾವುದೇ ರೀತಿಯ ರಸಗೊಬ್ಬರ ಕೊರತೆಯಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ (B.C.PATIL) ತಿಳಿಸಿದ್ದಾರೆ.
ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಲು ಈ ರೀತಿ ವಿಚಾರ ಹರಿದಾಡಿರಬಹುದು. ಆದ್ದರಿಂದ ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆಂದು ಹೇಳಿದರು. ೭ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ನೀಡಲಾಗಿದೆ. ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಗೊಬ್ಬರ ಕೂಡ ಸ್ಟಾಕ್ ಇದ್ದು, ಕೇಂದ್ರ ಸರ್ಕಾರ ೩,೬೦,೦೦೦ ಮೆಟ್ರಿಕ್ ಟನ್ ಹಂಚಿಕೆ ಮಾಡುತ್ತಿದ್ದು, ರೈತರಿಗೆ ಗೊಬ್ಬರದಲ್ಲಿ ಸಬ್ಸಿಡಿ ಕೂಡ ನೀಡಲಾಗ್ತಿದೆ. ಇದನ್ನೂ ಓದಿ : – ಮುಂಜಾನೆ ಜುಮ್ಮಾ ಮಸೀದಿ ವಿರುದ್ಧವಾಗಿ ಭಜನೆ ಶುರುಮಾಡಿದ ಸೇನೆ ಕಾರ್ಯಕರ್ತರು
ಪ್ರಧಾನಿ ಮಂತ್ರಿ ಮೋದಿಯವರು ಸಬ್ಸಿಡಿ ದರ ನೀಡಿದ್ದಾರೆ. ಬಿತ್ತನೆ ಬೀಜದ ಕೊರತೆಯೂ ಇಲ್ಲ ಎಂದು ಬಿಸಿ ಪಾಟೀಲ್ ಹೇಳಿದ್ರು. ಬೆಳೆ ವಿಮೆ ಇದುವರೆಗೂ ಬಂದಿಲ್ಲ ಅಂತ ವರದಿಯಾಗಿದೆ. ಆದರೆ ಈವರೆಗೂ ೨,೩೦,೦೦೦ ರೈತರಿಗೆ ಡಿಬಿಟಿ ಮೂಲಕ ಪರಿಹಾರ ನೀಡಲಾಗಿದೆ ಎಂದು ಹೇಳಿದ್ರು. ಇದನ್ನೂ ಓದಿ : – ಪ್ರತಿಯೊಂದಕ್ಕೂ ಜಾತಿ,ಧರ್ಮ,ಪಕ್ಷ ತರಬೇಡಿ – ಯು.ಟಿ ಖಾದರ್