ಅಗ್ನಿಪಥ್ ಯೋಜನೆ ಹಿಂಪಡೆವ ಮಾತೇ ಇಲ್ಲ – ಇದು ದಶಕಗಳ ಚಿಂತನೆಯ ಫಲ ಎಂದ ಅಜಿತ್ ದೋವಲ್

ಸಶಸ್ತ್ರ ಪಡೆಗಳಿಗೆ ‘ಅಗ್ನಿವೀರ’ರನ್ನು ನೇಮಿಸಿಕೊಳ್ಳುವ ‘ಅಗ್ನಿಪಥ್ (AGNIPATH) ಯೋಜನೆ’ಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೋವಲ್(AJITH DOVAL) ಹೇಳಿದ್ದಾರೆ. ಇದು ರಾತ್ರೋರಾತ್ರಿ ನಿರ್ಣಯಿಸಿ ಘೋಷಿಸಿದ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಯೋಜನೆಯನ್ನು ಜಾರಿ ಮಾಡಲು ದಶಕಗಳಿಂದ ಚರ್ಚಿಸಲಾಗಿದೆ. ಹಲವಾರು ಸಮಿತಿಗಳು ಸಶಸ್ತ್ರ ಪಡೆಗಳ ಸರಾಸರಿ ವಯಸ್ಸನ್ನು ಕಡಿಮೆ ಮಾಡಲು ಸಲಹೆ ನೀಡಿವೆ ಎಂದು ಹೇಳಿದರು. ಅಗ್ನಿಪಥ್ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹಲವಾರು ತಜ್ಞರ ಸಲಹೆಯ ಆಧಾರದ ಮೇಲೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ದೇಶ ಸೇವೆ ಮಾಡುವ ಪ್ರತಿಯೊಬ್ಬ ಯುವಕನ ಬಯಕೆಗೆ ಈ ಯೋಜನೆ ಪ್ರೇರಣೆ ನೀಡುತ್ತದೆ. ದೇಶವನ್ನು ರಕ್ಷಿಸುವ ಬದ್ಧತೆಯ ಭಾವವನ್ನು ಯುವಕರು ಹೊಂದಲಿದ್ದಾರೆ. ಅವರ ಶಕ್ತಿ ಮತ್ತು ಪ್ರತಿಭೆಯನ್ನು ಈ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಬಳಸಿಕೊಳ್ಳಲಾಗುತ್ತದೆ. ಸೇನೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸುಧಾರಣೆಯನ್ನು ಅಗ್ನಿಪಥ್ನಂತಹ ಯೋಜನೆಯ ರೂಪದಲ್ಲಿ ಹೊಂದಬಹುದು. ಇದರೊಂದಿಗೆ ಸೇನೆಯಲ್ಲಿ ಬಿಸಿರಕ್ತದ ಯುವಕರು ಮತ್ತು ಅನುಭವಿಗಳನ್ನು ತರಲು ಬಯಸುತ್ತೇವೆ. ಸೇನೆಯಲ್ಲಿ ಸರಾಸರಿ 30ರ ವಯಸ್ಸಿನ ಜವಾನರಿದ್ದಾರೆ. ಇದನ್ನು ಇನ್ನಷ್ಟು ಇಳಿಕೆ ಮಾಡಿ ಸೇನೆಗೆ ನವಚೇತನ ತರುವ ಪ್ರಯತ್ನ ಇದಾಗಿದೆ ಎಂದು ಖಾಸಗಿ ಮಾಧ್ಯಮಕ್ಕೆ ವಿವರಿಸಿದ್ದಾರೆ.

ಇದನ್ನೂ ಓದಿ : –  ಮಹಾ ವಿಕಾಸ್ ಅಘಾಡಿ ಬಿಕ್ಕಟ್ಟು- ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆ ವಜಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!