ಅವರವರ ಧರ್ಮಕ್ಕೆ ಅವರವರು ಗೌರವ ಕೊಡಬೇಕು. ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ.ಪೊಲೀಸರು ಅದನ್ನ ಪಾಲಿಸ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದ ಅಲ್ಪ ಸಂಖ್ಯಾತ ಶಾಸಕರ ನಿಯೋಗ ಇಂದು ಸಿಎಂ ಭೇಟಿ ಮಾಡಿ ಮನವಿ ಸಹ ಮಾಡಿದೆ. ಬೇಕಂತ ಕೆಣಕಿಕೊಂಡು ಜಗಳಕ್ಕೆ ಬರ್ತಿದಾರೆ. ಇದು ಸರ್ಕಾರದ ಜವಬ್ದಾರಿ. ಸಿಎಂ ಹಾಗೂ ಗೃಹ ಸಚಿವರ ಜವಬ್ದಾರಿ ಶಾಂತಿಯನ್ನ ಕಾಪಾಡಬೇಕು ಕುವೆಂಪು ಹೇಳಿದಂತೆ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ತಿಳಿಸಿದ್ರು.ಇದನ್ನೂ ಓದಿ : – ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
ಹೆಣ್ಣೂರು ಹಿಂದು ಕಾರ್ಯಕರ್ತನ ಹತ್ಯಗೆ ಯತ್ನ ವಿಚಾರವಾಗಿ ಮಾತನಾಡಿದ ಅವರು
ಅದು ಪೊಲೀಸರ ಡ್ಯೂಟಿ. ಫುಲ್ ಇನ್ ಫರ್ಮೆಷನ್ ನನಗೆ ಇಲ್ಲಾ. ತಿಳಿದು ಮಾತನಾಡುತ್ತೇನೆ. ಪೊಲೀಸರು ನೋಟಿಸ್ ಕೊಟ್ಟು ಏನೇನು ಕಿರುಕುಳ ಕೊಟ್ಡಿದ್ದಾರೆ. ಅವರು ಎಷ್ಟೆಲ್ಲಾ ತಾಳ್ಮೆಯಿಂದ ಇರಬೇಕು ಇದ್ದಾರೆ. ಸಿಎಂ ಜವಬ್ದಾರಿ ತೆಗೆದುಕೊಳ್ಳಬೇಕು .ಕಮ್ಯೂನಲ್ ವೈ ಲೆನ್ಸ್ ಆಗದಂತೆ ನೋಡಿಕೊಳ್ಳಬೇಕು. ಅವರ ಪಕ್ಷದವರಿಗೆ ಬುದ್ಧಿ ಹೇಳಬೇಕು. ನಳೀನ್ ಕುಮಾರ್ ಕಟೀಲ್ ಹೇಳಿಕೆ ಕೊಟ್ಡಿದ್ದಾರೆ.
ದಿನ ಪತ್ರಿಕೆಯಲ್ಲಿ ಚಾನಲ್ ನಲ್ಲಿ ಬರುತ್ತಿದೆ. ಅವರ ಮಕಗಳಿಗೆ ಮೊದಲು ಮಸಿ ಬಳಿದುಕೊಂಡು ಕೂರಲಿ. ಅವರಿಗೆ ಮಕ ತೋರಿಸೋಕೆ ಆಗ್ತಿಲ್ಲ ಅವರಿಗೆ ಜನ ಉಗಿತ ಇದ್ದಾರೆ. ಅವರ ಮಕ ತೊಳೆದುಕೊಳ್ಳಲಿ. ನಮ್ದೇನು ಹೇಳ್ತಾರೆ ಅವರ ಮನೆ ಮೊದಲು ಬಿಗಿ ಮಾಡಿಕೊಳ್ಳಲಿ. ಕ್ಯಾಬಿನೆಟ್ ಡ್ರಾಪ್ ಆ ಡ್ರಾಪ್ ಈ ಡ್ರಾಪ್ ಎಲ್ಲಾ ಆಗ್ತಿದೆಯಲ್ಲ ಅದನ್ನ ಮೊದಲು ನೋಡಿಕೊಳ್ಳಲಿ ಅವರ ಕಥೆ ಸದ್ಯ ಸಾಕಾಗಿದೆ ಎಂದು ಹೇಳಿದ್ರು.
ಇದನ್ನೂ ಓದಿ : – 2A ಮೀಸಲಾತಿಗಾಗಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ – ಜಯಮೃತ್ಯುಂಜಯ ಸ್ವಾಮೀಜಿ