ಬಿಜೆಪಿ ಸಂಸದೀಯ ಮಂಡಳಿ (BJP Parliamentary board) ಯ ಪುನಾರಚನೆಯಲ್ಲಿ ನಿತಿನ್ ಗಡ್ಕರಿ (Nitin gadkari) ಗೆ ಕೊಕ್ ನೀಡಿರುವ ಬಗ್ಗೆ ಎನ್ ಸಿ ಪಿ ಪ್ರತಿಕ್ರಿಯೆ ನೀಡಿದೆ. ಗಡ್ಕರಿ ಚಾಣಾಕ್ಷ ರಾಜಕಾರಣಿಯಾಗಿ ಬೆಳವಣಿಗೆಯಾಗುತ್ತಿರುವುದರಿಂದ ಅವರನ್ನು ಕುಗ್ಗಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿದೆ .
“ನಿಮ್ಮ ಸಾಮರ್ಥ್ಯ ಹಾಗೂ ಗುಣಮಟ್ಟ ಹೆಚ್ಚಿ, ಉನ್ನತ ಮಟ್ಟದ ಸವಾಲುಗಳಿಗೆ ತೆರೆದುಕೊಂಡರೆ ಬಿಜೆಪಿ ನಿಮ್ಮನ್ನು ಕುಗ್ಗಿಸುತ್ತದೆ. ಕಳಂಕಿತರು ಮೇಲೇರುತ್ತಾರೆ ಎಂದು ಎನ್ ಸಿಪಿ ಟ್ವಿಟರ್ ನಲ್ಲಿ ತಿಳಿಸಿದೆ. ನಿಷ್ಠುರವಾಗಿ ಮಾತನಾಡುವ ಗಡ್ಕರಿ ರಾಜಕೀಯ ವಲಯದಲ್ಲಿ ಪಕ್ಷಾತೀತವಾಗಿ ಉತ್ತಮ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ನಿತಿನ್ ಗಡ್ಕರಿ ಅವರೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj singh chauhan) ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ನಿತಿನ್ ಗಡ್ಕರಿ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯಿಂದ ಹೊರಗಿಡಲಾಗಿದ್ದು, ಇದು ಅವರು ಚಾಣಾಕ್ಷ, ಕುಶಾಗ್ರಮತಿ ರಾಜಕಾರಣಿಯ ಎತ್ತರವನ್ನು ಶೀಘ್ರವಾಗಿ ಏರಿರುವುದನ್ನು ತೋರಿಸುತ್ತದೆ. ಈ ಇಬ್ಬರೂ ರಾಜಕಾರಣಿಗಳನ್ನು ಸಂಸದೀಯ ಮಂಡಳಿಯಿಂದ ಕೈಬಿಟ್ಟಿರುವುದನ್ನು ಅವರ ರಾಜಕೀಯ ಬೆಳವಣಿಗೆಯನ್ನು ಕುಗ್ಗಿಸಲು ಕೈಗೊಂಡಿರುವ ನಿರ್ಣಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ : – ಯಡಿಯೂರಪ್ಪಗೆ ಸ್ಥಾನಮಾನ ನೀಡಿದ ವಿಚಾರ – ಬಹಳ ಸಂತೋಷ ಎಂದ ಸಿದ್ದರಾಮಯ್ಯ
ಗಡ್ಕರಿ ಅವರೊಂದಿಗೆ ಅಷ್ಟೇನೂ ಉತ್ತಮ ಸಂಬಂಧ ಹೊಂದಿರದ, ದೇವೇಂದ್ರ ಫಡ್ನವೀಸ್ (Devendra fadnavis) ಅವರನ್ನು ಕೇಂದ್ರ ಚುನಾವಣಾ ಸಮಿತಿಗೆ ಆಯ್ಕೆ ಮಾಡಲಾಗಿದೆ. ರಾಜಕೀಯದಿಂದಲೂ ಹೊರತಾದ ಹೆಚ್ಚಿನ ಜೀವನವಿದ್ದು, ಕೆಲವೊಮ್ಮೆ ರಾಜಕೀಯವನ್ನು ಬಿಟ್ಟುಬಿಡಬೇಕೆಂದೆನಿಸುತ್ತದೆ ಎಂದು ಕಳೆದ ತಿಂಗಳಷ್ಟೇ ಗಡ್ಕರಿ ಹೇಳಿದ್ದರು. ರಾಜಕಾರಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಬದಲಾವಣೆಗಿಂತಲೂ ಹೆಚ್ಚಾಗಿ ಅಧಿಕಾರದಲ್ಲಿರುವುದಕ್ಕಾಗಿಯೇ ಮಾಡಲಾಗುತ್ತಿದೆ ಎಂದು ಗಡ್ಕರಿ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : – ತಮಿಳುನಾಡಿನ ಕೊಯಮತ್ತೂರಿಗೆ ಸಿಎಂ ಬೊಮ್ಮಾಯಿ ಭೇಟಿ