ಚಿಲುಮೆ ಸಂಸ್ಥೆ (Chilume organization) ಯ ವೋಟರ್ ಐಡಿ (Voter id) ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ (MB.Patil) ಪ್ರತಿಕ್ರಿಯೆ ನೀಡಿದ್ದಾರೆ. ನಾಳೆ ಅಥವಾ ನಾಡಿದ್ದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡ್ತೀವಿ. ಇಲ್ಲಿ ಏನು ಅಕ್ರಮ ನಡೆದಿದೆ ಈ ಕುರಿತು ದೂರು ಕೊಡ್ತೀವಿ. ಜನರ ಖಾಸಗಿ ಮಾಹಿತಿಯನ್ನು ಕಲೆ ಹಾಕಿದ್ದಾರೆ .
ಅತ್ಯಂತ ಗಂಭೀರ ವಿಚಾರ ಇದು. ಕರ್ನಾಟಕ ಅಷ್ಟೆ ಅಲ್ಲ ಬೇರೆ ರಾಜ್ಯದ ಚುನಾವಣೆ ಕೂಡ ಇದೆ. ಅಲ್ಲೂ ಅಕ್ರಮ ನಡೆದಿದೆ ಅನ್ನೋ ಶಂಕೆ ಇದೆ ಎಂದು ಹೇಳಿದ್ರು. ಹಾಗಾಗಿ ಚುನಾವಣೆ ಆಯೋಗದ ಮುಂದೆ ಹೋಗ್ತೀವಿ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು. ಯಾರು ಭಾಗಿಯಾಗಿದ್ದಾರೆ ಅವರ ಮೇಲೆ ದೂರು ದಾಖಲಾಗಬೇಕು. ವೋಟರ್ ಲಿಸ್ಟ್ ಮತ್ತೆ ತಯಾರಿ ಮಾಡಬೇಕು. ಈಗ ಮಾಡಿರುವ ಡೇಟಾ ಕಲೆಕ್ಷನ್ ಕೈ ಬಿಡಬೇಕು. ಇದರಿಂದ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತದೆ. ಇವಿಎಂ (EVM) ಮಷೀನ್ ಗೂ ಆಕ್ಸಸ್ ಕೊಟ್ಟಿದ್ದಾರೆ. ಇದು ಕೂಡ ಆತಂಕದ ವಿಚಾರ. ಪ್ರಜಾಪ್ರಭುತ್ವದ ಕಗ್ಗೊಲೆ ಇದು. ಬೇರೆ ರಾಜ್ಯದಲ್ಲಿಯೂ ಹೀಗೆ ಆಗಿದ್ಯಾ ಅನ್ನೋದನ್ನ ನೋಡಬೇಕು. ಹಾಗಾಗಿ ನಾಳೆ ಡಿಕೆಶಿ, ಸುರ್ಜೆವಾಲಾ ಸೇರಿ ಹಲವರು ದೂರು ಕೊಡ್ತೀವಿ. ಅವರಿಗೆ ಬೆಂಗಳೂರು ನಂತರ ಇಡೀ ರಾಜ್ಯದ ಡೇಟಾ ಸಿಕ್ಕಿದೆ. ಹಾಗಾಗಿ ಇಡೀ ರಾಜ್ಯಾದ್ಯಂತ ಹೋರಾಟ ಮಾಡಲು ಹೊರಟಿದ್ದಾರೆ . ಡೇಟಾವನ್ನು ದುಡ್ಡಿಗೆ ಮಾರಲು ಹೊರಟಿದ್ದಾರೆ. ಪಕ್ಷಗಳು ಕೂಡ ಈ ಡೇಟಾವನ್ನು ಉಪಯೋಗಿಸಿಕೊಳ್ತಾರೆ. ಉಚಿತವಾಗಿ ಹೀಗೆ ಮಾಡಿದ್ದೇವೆ ಅಂದರೆ ಅದು ಸರಿಯಿಲ್ಲ. ಫ್ರೀಯಾಗಿ ಮಾಡೋದಿಕ್ಕು ಒಂದು ರೂಲ್ಸ್ ಇದೆ. ಆ ಸಂಸ್ಥೆಗೆ ಯುವಕರು ಹೋಗಿದ್ದಾರೆ. ಅವರಿಗೆ ನಿರುದ್ಯೋಗ ಸಮಸ್ಯೆ ಇದ್ದಿದ್ದರಿಂದ ಹೋಗಿದ್ದಾರೆ. ಅವರ ತಪ್ಪಲ್ಲ ಅದು ಎಂದು ಹೇಳಿದರು. ಇದನ್ನೂ ಓದಿ : – ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್ – ADGP ಅಲೋಕ್ ಕುಮಾರ್
ಸಿದ್ದರಾಮಯ್ಯ ಅಭ್ಯರ್ಥಿ ಘೋಷಣೆ ವಿಚಾರ
ಅಭ್ಯರ್ಥಿಗಳ ಘೋಷಣೆ ಕಮಿಟಿ ಮಾಡಬೇಕು. ಎಐಸಿಸಿ ಅಧ್ಯಕ್ಷರು ಒಪ್ಪಿಗೆ ನಂತರ ಬಿಡುಗಡೆ ಮಾಡಲಾಗುತ್ತದೆ. ಸಿದ್ದರಾಮಯ್ಯ (Siddaramaiah) ನವರು ಘೋಷಣೆ ಮಾಡಿದ್ದು ಸಿಟ್ಟಿಂಗ್ ಎಮ್ ಎಲ್ ಎ ಹೆಸರು. ಒಂದು ಸ್ಫೂರ್ತಿ ಕೊಡಲು ಹೀಗೆ ಮಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ. ಅದೇನು ಅಂತಿಮ ಅಲ್ಲ, ಅದಕ್ಕೂ ಪ್ರಕ್ರಿಯೆ ಇರಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ : – ಇದು ಆನೆ ಪ್ರಕರಣ ಅಲ್ಲ ರಾಜಕೀಯ ದಾಳಿ – ಎಂ.ಪಿ ಕುಮಾರಸ್ವಾಮಿ