ಭಾನಮತಿ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ ತಾಯಿ, ಮಗ ಹಾಗೂ ಸೊಸೆಯನ್ನು ಕಂಬಕ್ಕೆ ಕಟ್ಟಿ ಥಳಿಸಿ ಅಮಾನವೀಯವಾಗಿ ನಡೆಸಿಕೊಂಡ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪರದಾರ ಮೋತಕಪಳ್ಳಿ ಗ್ರಾಮದ 14 ಜನ ಗ್ರಾಮಸ್ಥರು ಸೇರಿಕೊಂಡು ಕಂಬಕ್ಕೆ ಕಟ್ಟಿ ಶಿವಲೀಲಾ, ಬಕ್ಕಮ್ಮ ಮತ್ತು ಸಂಗಪ್ಪ ಮೇಲೆ ಹಲ್ಲೆ ಮಾಡಲಾಗಿದೆ.
ಮೂರು ಜನರನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವ ವಿಡಿಯೋ ಮೊಬೈಲ್ ನಲ್ಲಿ ಸರೆ ಹಿಡಿಯಲಾಗಿದ್ದು, ಮೂರು ಜನರ ಮೇಲೆ ಕಲ್ಲು ಬಡಿಗೆಗಳಿಂದ ಹಣಮಂತ ಮತ್ತು ಆತನ 14 ಜನ ಸಂಗಡಿಗರು ಸೇರಿಕೊಂಡು ಹಲ್ಲೆ ಮಾಡಿರುವುದು ಕಂಡು ಬಂದಿದೆ.
ಹಣಮಂತ ಎಂಬುವರ ಮನೆಯಲ್ಲಿರುವ ವ್ಯೆಕ್ತಿಗೆ ಹುಷಾರಿಲ್ಲದ ಕಾರಣ ಈ ಮೂವರು ಸೇರಿಕೊಂಡು ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಹಲ್ಲೆ ಮಾಡಲಾಗಿದೆ.
ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿರುವ 14 ಜನರು ನಾಪತ್ತೆಯಾಗಿದ್ದು, ಅವರಿಗೆ ಪೊಲೀಸರು ಬಲೆ ಬೀಸಿದ್ದಾರೆ.