ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹಾಸನ ತಾಲೂಕಿನಲ್ಲಿ ನಡೆದಿದೆ.
ಹಾಸನದ ಹೇಮಾವತಿ ನಗರದ ನಿವಾಸಿ ಬೇಲೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರಾದ ಸತ್ಯಪ್ರಸಾದ್, ತಾಯಿ ಅನ್ನಪೂರ್ಣ, ಹಾಗೂ ಪುತ್ರ ಗೌರವ್ (21) ಆತ್ಮಹತ್ಯೆಗೆ ಶರಣಾದವರು.
ಗೌರವ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ. ಸತ್ಯಪ್ರಸಾದ್ ಅವರ ಪತ್ನಿ ಅನ್ನಪೂರ್ಣ ಗೃಹಿಣಿಯಾಗಿದ್ದರು. ಆದರೆ ನಾನಾ ಕಾರಣದಿಂದ ಸತ್ಯ ಪ್ರಸಾದ್ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ವಾರದ ಹಿಂದಷ್ಟೆ ಇವರ ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು. ಜೊತೆಗೆ ಪೆಟ್ರೋಲ್ ಬಂಕ್ ಕೂಡ ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿರಲಿಲ್ಲ.
ಈ ಎಲ್ಲಾ ಕಾರಣದಿಂದ ಸತ್ಯ ಪ್ರಸಾದ್ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೆಲ್ನೋಟಕ್ಕೆ ಕಂಡುಬಂದಿದೆ. ಇನ್ನು ಈ ಘಟನೆ ಬಗ್ಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ.