ವಿಜಯನಗರ : ಸಿಡಿಲು ಬಡಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ನೆಲಬೊಮ್ಮನಹಳ್ಳಿಯ ಬಳಿ ನಡೆದಿದೆ. ಮೃತರನ್ನು ಚಿನ್ನಪ್ಪ(40), ವೀರಣ್ಣ(50), ಪತ್ರೆಪ್ಪ(43), ರಾಜಶೇಖರ(32) ಎಂದು ಗುರುತಿಸಲಾಗಿದೆ.
ನೆಲಬೊಮ್ಮನಹಳ್ಳಿಯ ಬಳಿ ವೀರಣ್ಣ ಮತ್ತು ಚಿನ್ನಪ್ಪ ಕುರಿಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಭಾರಿ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಮಳೆ ಶುರುವಾಗಿದ್ದು, ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಎಂ.ಬಿ. ಅಯ್ಯನಹಳ್ಳಿಯ ಪತ್ರೆಪ್ಪ ಅವರು ಹೊಲಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ಸಿಡಿಲು ಬಡಿದಿದೆ. ಹರವದಿ ಗ್ರಾಮದ ರಾಜಶೇಖರ ಅವರಿಗೆ ಕ್ಯಾಸನಕೆರೆ ಸಮೀಪ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.