ಬೆಂಗಳೂರು: ಸ್ವಚ್ಛ ಮತ್ತು ಆರೋಗ್ಯಕರ ಉಗುರುಗಳು ಕೇವಲ ನಮ್ಮ ಕೈ ಮತ್ತು ಬೆರಳುಗಳ ಅಂದವನ್ನು ಮಾತ್ರ ಹೆಚ್ಚಿಸುವುದಿಲ್ಲ. ಅದರ ಜೊತೆಗೆ ಬ್ಯಾಕ್ಟೀರಿಯಾ ಮುಂತಾದ ಕೀಟಾಣುಗಳಿಂದ ಸಂಭವಿಸಬಹುದಾದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಂದ ಸಹ ನಮ್ಮನ್ನು ರಕ್ಷಿಸುತ್ತದೆ.
ಉಗುರುಗಳನ್ನು ಸಮಾನಾಂತರವಾಗಿ ಕತ್ತರಿಸಿ. ಕಮಾನಿನಾಕಾರವಾಗಿ ಕತ್ತರಿಸಬೇಡಿ. ಕಮಾನಿನಾಕಾರವಾಗಿ ಕತ್ತರಿಸುವುದರಿಂದಾಗಿ ಕಾಲ್ಬೆರಳಿಗೆ ಗಾಯವಾಗಬಹುದು ಅಥವಾ ಪಾದರಕ್ಷೆಗಳಿಂದ ಸಹ ಹಾನಿಯಾಗಬಹುದು. ಹೀಗೆ ಮಾಡುವುದರಿಂದ ನಿಮ್ಮ ಉಗುರುಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ.
ಸಾಮಾನ್ಯವಾಗಿ ಮನೆ ಕೆಲಸ ಮಾಡುವ ಗೃಹಿಣಿಯರು ಉಗುರುಗಳನ್ನು ಅಂದವಾಗಿಟ್ಟುಕೊಳ್ಳಲು ಸಾಧ್ಯಾವಾಗುವುದಿಲ್ಲ. ಮನೆ ಕೆಲಸ ಮಾಡುವ ಸಂದರ್ಭದಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಬಳಕೆ ಮಾಡುವುದು ಉತ್ತಮವಾಗಿರುತ್ತದೆ. ಇದರಿಂದ ಉಗುರುಗಳು ಕೊಳೆಯಾಗುವುದನ್ನು ತಪ್ಪಿಸಬಹುದು. ಮನೆ ಕೆಲಸ ಮುಗಿದ ಬಳಿಕ ಗ್ಲೌಸ್ ಗಳನ್ನು ತೆಗೆದು ಕೈಗಳನ್ನು ಶುಭ್ರವಾಗಿ ತೊಳೆಯಿರಿ. ನಂತರ ಉಗುರುಗಳ ಕೊನೆಯ ಭಾಗವನ್ನು ಸ್ವಚ್ಛಗೊಳಿಸಿ.
ಪ್ರೋಟೀನ್ ಹಾಗೂ ಕ್ಯಾಲ್ಶಿಯಂ ಕೊರೆಯಿಂದ ಉಗುರುಗಳು ಕಟ್ ಆಗುವುದು ಹಾಗೂ ಮೇಲ್ಪದರ ಏಳುತ್ತವೆ. ಇದನ್ನು ತಡೆಯಲು ಪ್ರತಿನಿತ್ಯ ಹಾಲು, ಮೊಸರು, ಮೀನು ಹಾಗೂ ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಿ.
ಕೈತೊಳೆಯುವಾದ ಅತಿಯಾದ ತಣ್ಣನೆಯ ಅಥವಾ ಅತಿಯಾದ ಬಿಸಿ ನೀರನ್ನು ಬಳಕೆ ಮಾಡಬೇಡಿ. ಬೆಚ್ಚಗಿನ ನೀರಿನಿಂದ ತೊಳೆದು, ಹ್ಯಾಂಡ್ ಕ್ರೀಮ್ ಹಚ್ಚಿರಿ.
ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಹಾಕಿ ಕೈಗಳ ಬೆರಳುಗಳನ್ನು 10 ನಿಮಿಷ ಇಡಿ. ಪ್ರತೀನಿತ್ಯ ಹೀಗೆ ಮಾಡುವುದರಿಂದ ಉಗುರುಗಳು ಹಳದಿ ಬಣ್ಣದಿಂದ ಮುಕ್ತಿ ಪಡೆಯುತ್ತವೆ.
ಆಲೀವ್ ಎಣ್ಣೆಯು ಮನೆಯಲ್ಲಿ ದೊರೆಯುವ ಸಾಂಪ್ರದಾಯಿಕ ಸೌಂದರ್ಯ ವರ್ಧಕಗಳಲ್ಲಿ ಸ್ಥಾನ ಪಡೆದಿದೆ. ಇದು ಉಗುರಿಗೂ ಸಹ ಸಹಾಯ ಮಾಡುತ್ತದೆ. ನಿಮ್ಮ ಉಗುರು ಚೆಂದ ಕಾಣಬೇಕೆಂದರೆ ಪ್ರತಿ ನಿತ್ಯ ಆಲೀವ್ ಎಣ್ಣೆಯನ್ನು ಅದಕ್ಕೆ ಲೇಪಿಸುತ್ತಿರಿ.