ಇಂದು ‘ಅಂತರಾಷ್ಟ್ರೀಯ ಯೋಗ ದಿನ’ – ರಾಜಕಾರಣಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗಿ

ಇಂದು ‘ಅಂತರಾಷ್ಟ್ರೀಯ ಯೋಗ ದಿನ’ ಎಲ್ಲಕಡೆ ಯೋಗ ಮಾಡುವ ವಾತಾವರಣ ಸೃಷ್ಟಿಯಾಗಿದ್ದು, ನಾಡಿನ ಹಲವು ಜನರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲಿಯೂ ರಾಜಕಾರಣಿಗಳು, ಸೆಲೆಬ್ರಿಟಿಗಳು ಯೋಗ ದಿನದ ಶುಭ ಕೋರುವ ಮೂಲಕ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.


ಗದಗ – 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆಯನ್ನು ಗದಗ ಜಿಲ್ಲಾಡಳಿತ ವತಿಯಿಂದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಚಾಲನೆ ನೀಡಿದ್ರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಮ್ ಸುಂದರೇಶ್ ಬಾಬು, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಪಂ ಸಿಇಒ ಸುಶೀಲಾ, ಎಸಿ ಅನ್ನಪೂರ್ಣ, ಎಸ್ಪಿ ಶಿವಪ್ರಕಾಶ್ ದೇವರಾಜು ಸೇರಿದಂತೆ ಅನೇಕರು ಭಾಗಿಯಾಗಿದ್ದರು.


ವಿಜಯಪುರ – ಯೋಗದಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಉಂಟಾಗಲಿದೆ. ಪ್ರತಿ ದಿನ ಯೋಗ ಮಾಡಬೇಕು. ಸಮಾಜವನ್ನು ಸದೃಢವಾಗಿಸಬೇಕು. ಜಾತಿ, ಮತ, ಪಂಥ ಮೀರಿದ ಶಕ್ತಿ ಯೋಗದಲ್ಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಮಂಗಳವಾರ ಯೋಗ ದಿನದ ವಿಶ್ವ ದಿನ ಆಚರಿಸಿ, ಮಾತನಾಡಿದರು. ಅಲ್ಲದೇ, ದೇಶದಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದವರು ಪ್ರಧಾನಿ ನರೇಂದ್ರ ಮೋದಿ. ಬಯಲು ಶೌಚ ಮುಕ್ತ ಹಳ್ಳಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಹೀಗೆ ಅನೇಕ ನೈತಿಕ ಜವಾಬ್ದಾರಿಗಳ ಮಹತ್ವ ಸಾರಿದವರು ಮೋದಿ ಎಂದರು.


ಬಾಗಲಕೋಟೆ – ಚಾಲುಕ್ಯರ ನಾಡಿನಲ್ಲಿ ಯೋಗ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಐತಿಹಾಸಿಕ ಬಾದಾಮಿ ತಾಲೂಕಿನ ಪಟ್ಟದಕಲ್ಲ ನಲ್ಲಿ ಸ್ಮಾರಕಗಳ ಮುಂದೆ, ಇತಿಹಾಸ ನಿರ್ಮಿಸಿದ ಯೋಗ ದಿನ. ವಿಶ್ವ ಯೋಗಾ ದಿನಾಚರಣೆ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪ್ರಧಾನಿ ಮೋದಿ ಆಶಯದಂತೆ ಪ್ರವಾಸಿ ತಾಣಗಳಲ್ಲಿ ಯೋಗ ದಿನಾಚರಣೆ ಮಾಡಲಾಯಿತು. ಕೇವಲ ಒಂದೇ ದಿನಕ್ಕೆ ಸಿಮೀತಗೊಳ್ಳದೇ.ಪ್ರತಿ ನಿತ್ಯ ಯೋಗ ಮಾಡಿ,ಆರೋಗ್ಯ ಕರ ಬೆಳೆವಣಿಗೆ ಮಾಡಿಕೊಳ್ಳಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಕರೆ ನೀಡಿದ್ರು.

ರಾಯಚೂರು – ಇನ್ನು ರಾಯಚೂರಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಯೋಗ ದಿನಾಚರಣೆ ಆಚರಣೆ ಮಾಡಲಾಯಿತು. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಯೋಗಾಭ್ಯಾಸ. ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಇತರ ಎಲ್ಲಾ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.


ತುಮಕೂರು – 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ತುಮಕೂರು ಪ್ರೆಸ್ ಕ್ಲಬ್ ವತಿಯಿಂದ ಪಾರಂಪರಿಕ ತಾಣ ಆಲದಮರ ಪಾರ್ಕ್ ನಲ್ಲಿ ಆಯೋಜನೆ ಮಾಡಲಾಯಿತು. ಯೋಗ ಕಾರ್ಯಕ್ರಮಕ್ಕೆ ನಗರ ಶಾಸಕ ಜ್ಯೋತಿಗಣೇಶ್, ತುಮಕೂರು ತಹಶಿಲ್ದಾರ್ ಮೋಹನ್, ಪಾಲಿಕೆ ಸದಸ್ಯೆ ಗಿರಿಜಾ ದನ್ಯಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.


ಚಿಕ್ಕಬಳ್ಳಾಪುರ – ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ವಿಶ್ವವಿಖ್ಯಾತ ಭೋಗನಂದೀಶ್ವರ ದೇವಸ್ಥಾನದಲ್ಲಿ ಯೋಗಭ್ಯಾಸ ಮಾಡಲಾಯಿತು. ಯೋಗಭ್ಯಾಸದಲ್ಲಿ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಸಚಿವ ಎಂಟಿಬಿ ನಾಗರಾಜ್ ಹಾಗೂ ಜಿಲ್ಲಾಧಿಕಾರಿ ಆರ್ ಲತಾ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.

ಚಿಕ್ಕಮಗಳೂರು – ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಚಿಕ್ಕಮಗಳೂರು ನಗರದ ಒಕ್ಕಲಿಗರ ಕಲ್ಯಾಣಮಂಟಪದಲ್ಲಿ ನೂರಾರು ಜನರಿಂದ ಸಾಮೂಹಿಕ ಯೋಗ ದಿನಾಚರಣೆಯನ್ನು ಆವರಣೆ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ನೂರಾರು ಜನರ ಸಾಥ್ ನೀಡಿದರು.


ಕೊಪ್ಪಳ – 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಹನುಮ ಜನ್ಮಿಸಿದ ಸ್ಥಳ ಅಂಜನಾದ್ರಿಯಲ್ಲಿ ಯೋಗ ಮಹೋತ್ಸವ. ಜಿಲ್ಲಾಡಳಿತ & ಆಯುಷ್ ಇಲಾಖೆ ನೇತೃತ್ವದಲ್ಲಿ ಯೋಗ ದಿನಾಚರಣೆ ಮಾಡಲಾಯಿತು. ಯೋಗ ಮಹೋತ್ಸವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದನ್ನೂ ಓದಿ : – ಯೋಗಕ್ಕೆ ಒಂದು ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ- ಅದಿತಿ ಪ್ರಭುದೇವ್


ಧಾರವಾಡ – ವಿಶ್ವ ಯೋಗ ದಿನ ಹಿನ್ನೆಲೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಜಿಲ್ಲಾಡಳಿತದಿಂದ ಐತಿಹಾಸಿಕ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಯೋಗ ದಿನ ಆಚರಣೆ ಮಾಡಲಾಯಿತು. ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಚಿವ ಶಂಕರಪಾಟೀಲ್ ಮುನೇನಕೊಪ್ಪ ರಿಂದ ಚಾಲನೆ ನೀಡಲಾಯಿತು.


ಕೋಲಾರ – ಕೋಲಾರಲ್ಲಿ ಹಮ್ಮಿಕೊಂಡಿದ್ದ 8 ನೇ ಅಂತರಾಷ್ಟ್ರೀಯ ಯೋಗ ದಿನಾಚಾರಣೆ, ಕೋಲಾರದ ಅಂತರಗಂಗೆ ಬೆಟ್ಟದ ಪ್ರಕೃತಿಯ ಮಡಿಲಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ, ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಏಕಕಾಲದಲ್ಲಿ 20 ಸಾವಿರಕ್ಕಿಂತ ಹೆಚ್ಚು ಮಂದಿಯಿಂದ ಯೋಗಭ್ಯಾಸ ಮಾಡಲಾಯಿತು. ಯೋಗ ದಿನಾಚರಣೆಯಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್, ಎಂ ಎಲ್.ಸಿ ಗೋವಿಂದರಾಜು, ಎಸ್ಪಿ, ಡಿಸಿ ಸಿಇಓ, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ : – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!