ಬಿಜೆಪಿ (BJP)ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಖಂಡಿಸಿ ನಾಳೆ ಬೆಂಗಳೂರಿನ 300 ಕಡೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಈ ಸಂಬಂಧ ಶಾಸಕ ಎನ್.ಎ ಹ್ಯಾರಿಸ್ (NA Harris) ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಜ.23ರಂದು ನಗರದ ಟ್ರಿನಿಟಿ ಸರ್ಕಲ್ ನಲ್ಲಿ ಸಿದ್ದರಾಮಯ್ಯ , ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಂಗಳೂರು ನಗರದ 300 ಕಡೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಲು ‘ಕೈ’ ಪಾಳಯ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಒಟ್ಟು 200 ಸಿಗ್ನಲ್, 26 ಫ್ಲೈಓವರ್, 25 ಮೆಟ್ರೋ ಸ್ಟೆಷನ್ ಗಳಲ್ಲಿ ಪ್ರತಿಭಟನೆ ಏಕಕಾಲಕ್ಕೆ ನಡೆಯಲಿದೆ. ಇದನ್ನು ಓದಿ :-ಸಿದ್ದರಾಮಯ್ಯನ ಟೀಕೆ ಟಿಪ್ಪಣಿ ಗಳಿಗೆ ಕಿವಿಗೊಡುವ ಅಗತ್ಯವಿಲ್ಲ – ಸಿ.ಸಿ ಪಾಟೀಲ್
ಈ ಕುರಿತು ಮಾತನಾಡಿದ ಶಾಸಕ ಎನ್.ಎ.ಹ್ಯಾರಿಸ್, ಭ್ರಷ್ಟಾಚಾರದ ಆರೋಪಗಳಿಗೆ ಬಿಜೆಪಿ ಈವರೆಗೆ ಉತ್ತರ ಕೊಡಲಾಗಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದೆ ಇನ್ನಷ್ಟು ಹೋರಾಟ ಮಾಡ್ತೇವೆ. ಜೊತೆಗೆ `ಭ್ರಷ್ಟಾಚಾರ ನಿಲ್ಲಿಸಿ, ಬೆಂಗಳೂರು ಉಳಿಸಿ’ ಕಾರ್ಯಕ್ರಮ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ. 40 ಪರ್ಸೆಂಟ್ ಕಮಿಷನ್ ಗೆ ಕೊನೆಯೇ ಇಲ್ವಾ? ಅನ್ನೋ ತರಹ ಆಗಿದೆ. ಯಾವ ಸಚಿವರೂ ಇದಕ್ಕೆ ಉತ್ತರ ಕೊಡ್ತಾ ಇಲ್ಲ. ಆರೋಪಕ್ಕೆ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಸುಮ್ನೆ ವಿರೋಧ ಪಕ್ಷವಾಗಿ ಕೂರುವುದಕ್ಕೆ ನಾವೂ ತಯಾರಿಲ್ಲ. ಪ್ರಧಾನಿ ಮೋದಿ ಕೂಡ ಇದುವರೆಗೆ 40 ಪರ್ಸೆಂಟ್ ಕಮಿಷನ್ಗೆ ಉತ್ತರ ಕೊಟ್ಟಿಲ್ಲ. ಪ್ರಧಾನಿ ಕಚೇರಿಯಿಂದಲೂ ಉತ್ತರ ಸಿಗುತ್ತಿಲ್ಲ. ಪಿಎಸ್ಐ ಸ್ಕ್ಯಾಮ್ ಏನು ಮಾಡಿದ್ರು? ಹರಿಶ್ಚಂದ್ರನ ಮೊಮ್ಮಕ್ಕಳ ತರಹ ಮಾತಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ :- NPS ರದ್ದುಗೊಳಿಸಿ OPS ಜಾರಿ ಮಾಡಿ – ಶಿವಮೊಗ್ಗದಲ್ಲಿ ಪ್ರತಿಭಟನೆ