ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ( chikkaballapura ) ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದ ಕೆರೆ ಕೋಡಿ ಹರಿದಿದ್ದು, ನೋಡಲು ಹೋದ ಮೂವರು ಬಾಲಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸಂಜೆ ಶಾಲೆ ಮುಗಿದ ಮೇಲೆ ಕೆರೆ ನೋಡಲು ಹೋದ ಬಾಲಕರು ಕೆರೆಯಲ್ಲಿ ಈಜಾಡಲು ಹೋಗಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೋಡೇಗಂಡ್ಲು ಗ್ರಾಮದ ವೆಂಕಟೇಶ್-ಗಾಯತ್ರಿ ದಂಪತಿ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿ ಪ್ರಜ್ವಲ್(09) ಮೃತ ದುರ್ದೈವಿಗಳು. ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : – 18ನೇ ವಯಸ್ಸಿನಲ್ಲಿ ಮೋಹಕತಾರೆ ರಮ್ಯಾ ಹೇಗಿದ್ದರು ನೋಡಿ ?- ವೈರಲ್ ಆಗಿದೆ ಅವರ ಹಳೇ ಐಡಿ ಕಾರ್ಡ್ ಫೋಟೋ