ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಏ.13 ರಂದು 108 ಗ್ರಾಮಗಳಲ್ಲಿ ಟ್ಯಾಕ್ಟರ್ ರ್ಯಾಲಿ – ಎಸ್.ಆರ್ ಪಾಟೀಲ್

ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಏ.13 ರಂದು 108 ಗ್ರಾಮಗಳಲ್ಲಿ ಟ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಎಸ್.ಆರ್ ಪಾಟೀಲ್ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಗದಗ ಜಿಲ್ಲೆಯ ನರಗುಂದ ದಿಂದ ಪ್ರಾರಂಭವಾಗಲಿದ್ದು,ಶಿರಹಟ್ಟಿ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.

ಗದಗ,ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಸಂಚಾರ ಮಾಡಿ,ಏಪ್ರಿಲ್ 17 ರಂದು ಬೀಳಗಿ ತಾಲೂಕಿನ ಬಾಡಗಂಡಿ ಬಾಪೂಜಿ ಅಂತರರಾಷ್ಟ್ರೀಯ ಶಾಲೆಯ ಆವರಣದಲ್ಲಿ ಸಮಾರೋಪವಾಗಲಿದೆ ಎಂದರು. ಕೃಷ್ಣ ಮೇಲ್ದಂಡೆ ಯೋಜನೆ ಹಂತ 3 ಕ್ಕೆ ಹಂಚಿಕೆಯಾದ 130 ಟಿಎಂಸಿ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕ 7 ಜಿಲ್ಲೆಗಳ 15 ಲಕ್ಷ ಎಕರೆ ಜಮೀನನ್ನು ನೀರಾವರಿ ಒಳಪಡಿಸಬೇಕು. ಈ ಯೋಜನೆಯಿಂದ ಬಾಧಿತರಾಗುವ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಮತ್ತು ಪುನರ್ ವಸತಿ ಕಲ್ಪಿಸಿಕೊಡಬೇಕು.

ದಿ.ಬಿ ಎಮ್ ಹೊರಕೇರಿಯವರ ಹುಟ್ಟುಹಾಕಿದ ಮಹಾದಾಯಿ ಯೋಜನೆ ಮೂಲಕ 13.5 ಟಿಸಿಎಂ ನೀರನ್ನು ಬಳಸಿಕೊಂಡು ಧಾರವಾಡ, ಬೆಳಗಾವಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು,ವಿದ್ಯುತ್ ಉತ್ಪಾದನೆ ಹಾಗೂ ಇನ್ನಿತರ ಸೌಲಭ್ಯಗಳಾಗಿ ಈ ನೀರನ್ನು ಒದಗಿಸಬೇಕಾಗಿದೆ ಹಾಗೂ ನವಲಿ ಬಳಿ ತುಂಗಭದ್ರಾ ನದಿಗೆ ಸಮತೋಲನ ಜಲಾಶಯ ನಿರ್ಮಿಸಿ 37 ಟಿಸಿಎಂ ನೀರ ಸಂಗ್ರಹಿಸಿ, ಬಳ್ಳಾರಿ ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜಮೀನುಗಳನ್ನು ನೀರಾವರಿ ಒಳಪಡಿಸಬೇಕು ಹಾಗೂ ಈ ಎಲ್ಲಾ ಯೋಜನೆಗಳಿಗೆ ರಾಜ್ಯದ ಬಜೆಟ್ ದಲ್ಲಿ 15 ರಷ್ಟು ಹಣ ಮತ್ತು ಸಂಪೂರ್ಣ ಸಿಬ್ಬಂದಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದನ್ನುಓದಿ :- ನನಗೆ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ – ಅರಗ ಜ್ಞಾನೇಂದ್ರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!