ಬೆಂಗಳೂರಿನ ಮಂಗನಹಳ್ಳಿ ಬ್ರಿಡ್ಜ್ ಬಳಿ ಬೆಸ್ಕಾಂ ಸಂಸ್ಥೆಯ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ತಂದೆ-ಮಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಘಟನೆ ನಡೆದಿತ್ತು. ಬೈಕ್ ನಲ್ಲಿ ತಂದೆ ಮಗಳು ತೆರಳುತ್ತಿದ್ದಾಗ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿತ್ತು. ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ 55 ವರ್ಷದ ಶಿವರಾಜ್ ಮೃತಪಟ್ಟಿದ್ದು 18 ವರ್ಷದ ಚೈತನ್ಯಾಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಕೆಯೂ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಇದನ್ನು ಓದಿ :- RENUKACHARYA – ರೇಣುಕಾಚಾರ್ಯ ಮಗ ಮಗಳಿಗೆ ಎಸ್ ಸಿ ಸರ್ಟಿಫಿಕೇಟ್ ಕೊಡಿಸಿದ್ದಾರೆ – ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ
ಟ್ರಾನ್ಸ್ಫಾರ್ಮರ್ ನಲ್ಲಿ ಸಮಸ್ಯೆ ಇದ್ದಿದ್ದಾಗಿ ಬೆಸ್ಕಾಂಗೆ ಕರೆ ಮಾಡಲಾಗಿತ್ತು. ಮೆಸೇಜ್ ಕೂಡ ಬಂದಿತ್ತು. ಆದರೆ ಯಾರೂ ಕೂಡ ರಿಪೇರಿ ಮಾಡಲು ಬಂದಿರಲಿಲ್ಲ. ಬೆಸ್ಕಾಂ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಇಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿರುವ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಸೋಮಶೇಖರ್ ಗೆ ಸಾರ್ವಜನಿಕರು ಘೇರಾವ್ ಹಾಕಿದ್ದಾರೆ. ಜನರ ಪ್ರತಿಭಟನೆ ನೋಡಿ ಸಚಿವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದನ್ನು ಓದಿ :- SUPREMECOURT- ಹಿಜಾಬ್ ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ – ಸಿಜೆಐ
ಮುಂದಿನ ವಾರ ಚೈತನ್ಯಳ ನಿಶ್ಚಿತಾರ್ಥ ನಿಗದಿಯಾಗಿತ್ತಲ್ಲದೆ, ಕೆಲ ದಿನಗಳಲ್ಲೇ ಮದುವೆ ಸಮಾರಂಭ ನಡೆಯಬೇಕಿತ್ತು. ಮದುವೆಗೆ ಕಲ್ಯಾಣ ಮಂಟಪವೊಂದನ್ನು ಬುಕ್ ಮಾಡಿಕೊಂಡು ಸ್ಕೂಟಿಯಲ್ಲಿ ನೈಸ್ ರಸ್ತೆಯ ಮಂಗನಹಳ್ಳಿ ಬಳಿ ಬರುತ್ತಿದ್ದಾಗ, ವಿದ್ಯುತ್ ಪರಿವರ್ತಕ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಸ್ಥಳೀಯರು ಕೂಡಲೇ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಅವಘಡದಿಂದ ಇಬ್ಬರನ್ನೂ ಕಳೆದುಕೊಂಡು ಮದುವೆಯ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸಶ್ಮಾನ ಮೌನ ಆವರಿಸಿದೆ.
ಇದನ್ನು ಓದಿ :- JOE BIDEN – ಉತ್ತರಾಧಿಕಾರಿಯನ್ನಾಗಿ ಕಮಲಾ ಹ್ಯಾರಿಸ್ರನ್ನ ಯಾಕೆ ಆಯ್ಕೆ ಮಾಡಬೇಕಿತ್ತು?- ಪತಿ ವಿರುದ್ಧ ಜೋ ಬೈಡನ್ ಪತ್ನಿ ಅಸಮಾಧಾನ