ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ಕೊಟ್ಟು ಮರಳುತ್ತಿದ್ದ ಅಪ್ಪ-ಮಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ಟಿವಿಎಸ್ ನಲ್ಲಿ ಅಪ್ಪ-ಮಗಳು ಬರುತ್ತಿದ್ದಾಗ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ.
ದುರ್ಘಟನೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿ ಗ್ರಾಮದ ನಿವಾಸಿ ಜಯಣ್ಣ (58) ಮತ್ತು ಮಗಳು ರಕ್ಷಿತಾ (19) ಮೃತಪಟ್ಟಿದ್ದಾರೆ.
ಪಿಳ್ಳೇನಹಳ್ಳಿಯಲ್ಲಿನ ದೊಡ್ಡ ಮಗಳ ಮನೆಗೆ ಬಾಗಿನ ಕೊಡಲು ಜಯಣ್ಣ ಚಿಕ್ಕ ಮಗಳ ಜೊತೆ ಹೋಗಿದ್ದರು. ಬಾಗಿನ ಕೊಟ್ಟು ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.