ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಬಗ್ಗೆ ಗೊಂದಲ ಹಿನ್ನೆಲೆಯಲ್ಲಿ ಕಮಿಷನರ್ ಕಮಲ್ ಪಂತ್ ಗೆ ಸಿಎಂ ಬೊಮ್ಮಾಯಿ ಬುಲಾವ್ ನೀಡಿದ್ದಾರೆ. ಆರ್ ಟಿ ನಗರದ ನಿವಾಸಕ್ಕೆ ಸಿಎಂ ಜೊತೆ ಚರ್ಚಿಸಲು ಕಮಲ್ ಪಂತ್ ಆಗಮಿಸಿದ್ದರು. ಕಮಿಷನರ್ ಹೇಳಿಕೆ ಸುಳ್ಳು ಎಂದು ಬಿಜೆಪಿ ಎಂ ಎಲ್ ಸಿ ರವಿಕುಮಾರ್ ಹೇಳಿದ್ದರು. ಇದನ್ನು ಓದಿ – “ಇಮ್ರಾನ್ ಓರ್ವ ಸೈಕೋಪಾತ್” ಅಂದ ಪಾಕ್ ಸುಂದರಿ ಯಾರು ಗೊತ್ತಾ..?
ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಕಮಲ್ ಪಂತ್ ವರದಿಯಲ್ಲಿ ಇದ್ದಿದ್ದನ್ನೇ ಹೇಳಿದ್ದೆ ಎಂದು ತಿಳಿಸಿದ್ರು. ರಾಜಕೀಯ ನಾಯಕರ ಹೇಳಿಕೆಯಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ನಡುವೆ ಸೈಮನ್ ಗೆ ಬಿಜೆಪಿ ನಾಯಕರು 5 ಲಕ್ಷ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ. ಸೈಮನ್ ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಕೆಯನ್ನ ಪಡೆಯಲಾಗಿದೆ ಎಂದು ಜಮೀರ್ ಹೇಳಿದ್ದಾರೆ.
ಇದನ್ನು ಓದಿ – ಬಿಟ್ ಕಾಯಿನ್ ಹಗರಣದ ಬಗ್ಗೆ FBI ತನಿಖೆ – ಇದು ನಾಚಿಕೆಗೇಡಿನ ಸಂಗತಿ ಎಂದ ಸಿದ್ದರಾಮಯ್ಯ