ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ಅಪ್ರಾಪ್ತರಿಗೆ ಮರಣದಂಡನೆ

ಉತ್ತರ ಕೊರಿಯಾದಲ್ಲಿ ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳು ದಕ್ಷಿಣ ಕೊರಿಯಾದ ಡ್ರಾಮಾವನ್ನು ವೀಕ್ಷಿಸಿದ ಹಿನ್ನೆಲೆಯಲ್ಲಿ ಆ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿದ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ.

ಉತ್ತರ ಕೊರಿಯಾ ( UTTHARA KORIYA ) ದಲ್ಲಿ ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳು ದಕ್ಷಿಣ ಕೊರಿಯಾದ ಡ್ರಾಮಾವನ್ನು ವೀಕ್ಷಿಸಿದ ಹಿನ್ನೆಲೆಯಲ್ಲಿ ಆ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿದ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ.

North Korea: ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ಅಪ್ರಾಪ್ತರಿಗೆ ಮರಣದಂಡನೆ -  Report Says: North Korea publicly executes two minors for watching,  distributing K-dramas| TV9 Kannada

ದಕ್ಷಿಣ ಕೊರಿಯಾ ಸಿನಿಮಾ ವೀಕ್ಷಿಸುವುದನ್ನು ಉತ್ತರ ಕೊರಿಯಾ ನಿಷೇಧಿಸಿದೆ. 16-17 ವರ್ಷದ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಕೋಣೆಯೊಂದರಲ್ಲಿ ಕೆ ಡ್ರಾಮಾ ವೀಕ್ಷಿಸಿದ್ದರಿಂದ ಅವರನ್ನು ಬಂಧಿಸಿ ವಾಯುನೆಲೆಯ ಮೈದಾನದಲ್ಲಿ ಸ್ಥಳೀಯರ ಎದುರು ಗಲ್ಲಿಗೇರಿಸಲಾಗಿದೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ. ಉತ್ತರ ಕೊರಿಯಾದ ರಿಯಾಂಗ್ಗಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಈ ಭಾಗವು ಚೀನಾ ( CHINA ) ದ ಗಡಿ ಭಾಗದ ಸಮೀಪವಿದೆ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸುಲಭವಾಗಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಸಿನಿಮಾಗಳು ಸುಲಭವಾಗಿ ಸಿಗುತ್ತವೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳಿಗೂ ಕೆ- ಡ್ರಾಮಾ ದೊರೆತಿದಿದ್ದು, ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಬಾಲಕರನ್ನು ಗಲ್ಲಿಗೇರಿಸಲಾಗಿತ್ತು, ಈ ಸುದ್ದಿ ಕಳೆದ ವಾರ ಬೆಳಕಿಗೆ ಬಂದಿದೆ. ಬಾಲಕರು ದುಷ್ಕೃತ್ಯವೆಸಗಿದ್ದಾರೆ ಹೀಗಾಗಿ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ಉತ್ತರ ಕೊರಿಯಾ ನಿಲುವನ್ನು ಸಮರ್ಥಿಸಿಕೊಂಡಿದೆ. ತಾವು ವೀಕ್ಷಿಸಿದ ದಕ್ಷಿಣ ಕೊರಿಯಾದ ಕೆ-ಡ್ರಾಮಾವನ್ನು ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೂ ನೀಡಿದ್ದಾರೆ. ಆದರೆ ಉತ್ತರ ಕೋರಿಯಾದಲ್ಲಿ ದಕ್ಷಿಣ ಕೋರಿಯಾದ ಸಿನಿಮಾ, ಡ್ರಾಮಾವನ್ನು ವೀಕ್ಷಿಸುವುದು ಕಾನೂನು ಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಕಿಮ್ ಜಾಂಗ್ ಉನ್ ಸರ್ಕಾರವು ಆ ಇಬ್ಬರು ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಿದ್ದಾರೆ .

ಇದನ್ನು ಓದಿ : – ನಾಯಿಮರಿ ಯಿಂದ ಹುಟ್ಟಿತು ಹರಿಪ್ರಿಯ – ವಸಿಷ್ಠ ನಡುವಿನ ಪ್ರೇಮ

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!