ರಾಜ್ಯದ ಜನರಿಗೆ ವಿದ್ಯುತ್ ಶಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕುಮಾರಸ್ವಾಮಿ (HD Kumaraswamy ) ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈಗ ವಿದ್ಯುತ್ ಹೆಚ್ಚಳ ಮಾಡಿ ಚುನಾವಣೆ ಸಮಯದಲ್ಲಿ ಕಡಿಮೆ ಮಾಡ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನ ಹಾಳು ಮಾಡಿವೆ. ವಿದ್ಯುತ್ ಸಚಿವರು ಕೆಇಆರ್‌ಸಿ ದರ ಹೆಚ್ಚಳ ಮಾಡುತ್ತೆ ಅಂತ ಹೇಳ್ತಾರೆ.
ನಿವೃತ್ತ ಐಎಎಸ್ (IAS )ಅಧಿಕಾರಿ ಗುರು ಚರಣ್ ಇಂಧನ ಇಲಾಖೆ ಪರಿಸ್ಥಿತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಹೆಸ್ಕಾಂ ಗಳು ಸೇರಿ ಎಲ್ಲಾ ಕಂಪನಿಗಳ ಪರಿಸ್ಥಿತಿ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಲ್ಲಿ 30-38 ಸಾವಿರ ಕೋಟಿಗಳು ಹಣ ಸರ್ಕಾರದಿಂದಲೇ ಕೆಇಆರ್‌ಸಿಗೆ ಕೊಡಬೇಕು. ನಾನು ಸಿಎಂ ಆಗಿದ್ದಾಗ ಎಸ್ಕಾಂ ಸೇರಿದಂತೆ ಎಲ್ಲಾ ಕಂಪನಿಗಳಿಗೆ 13-14 ಸಾವಿರ ಕೋಟಿ ಮಾತ್ರ ಕೊಡಬೇಕಿತ್ತು. ಇದನ್ನೂ ಓದಿ : – ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ – ಚುನಾವಣಾ ಆಯೋಗ ಘೋಷಣೆ
3 ವರ್ಷಕ್ಕೆ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು 30 ಸಾವಿರ ಕೋಟಿ ಮಾಡಿವೆ. ಬುಕ್ಸ್ ಆಫ್ ಅಕೌಂಟ್ ನಲ್ಲಿ ಮಾತ್ರ ಲಾಭ ತೋರಿಸಿಕೊಂಡಿದ್ದಾರೆ. 2016-17 ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಯುನಿಟ್ 9 ರೂ ಮಾಡಿ ಖರೀದಗೆ ನಿಗದಿ ಮಾಡಿದಾಗ ನಾನೇ ವಿರೋಧ ಮಾಡಿದ್ದೆ. ಅವತ್ತಿನ ಅಧ್ಯಕ್ಷರು ಯಾಕೆ ಮಾಡಬಾರದು ಅಂತ ನನ್ನ ವಿರುದ್ಧ ಮಾತನಾಡಿದ್ದರು. ಅಂದಿನ ಸದನ ಸಮಿತಿ ಅಧ್ಯಕ್ಷ ಕುರಿ ಕಾಯೋಕೆ ತೋಳದ ರೀತಿ ಮಾಡಿದ್ರು. ಇನ್ನು ಕಷ್ಟದ ದಿನಗಳು ರಾಜ್ಯಕ್ಕೆ ಬರಲಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ಕೊಡುತ್ತೇನೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – Maha Crisis – 52 ಶಾಸಕರನ್ನು ಬಿಟ್ಟರೂ ಪವಾರ್ ಅವರನ್ನು ಬಿಡಲ್ಲ- ಉದ್ಧವ್ ವಿರುದ್ಧ ಬಂಡಾಯ ಶಾಸಕರ ಅಸಮಾಧಾನ