ಕಳೆದ 15 ದಿನಗಳಲ್ಲಿ ಸುರಿದ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಹೀಗಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ( DAKSHINAKANNADA ) ದಲ್ಲಿ ಮತ್ತೆರಡು ದಿನ ರೆಡ್ ಅಲರ್ಟ್ (RED ALERT ) ಇದ್ದು ಜನರಲ್ಲಿ ಆತಂಕ ಶುರು ಮಾಡಿದೆ. ಈ 2 ಜಿಲ್ಲೆಯಲ್ಲಿ ಮುಂಗಾರು ಮಳೆ ಸದ್ಯಕ್ಕೆ ಬ್ರೇಕ್ ಕೊಡುವ ಲಕ್ಷಣ ಕಾಣಿಸ್ತಿಲ್ಲ. ಹಳೆಯ ಎಲ್ಲಾ ದಾಖಲೆಗಳನ್ನು ಮೀರಿ ವರುಣದೇವ ಮುನ್ನುಗ್ಗುತ್ತಿದ್ದಾನೆ.
ದಕ್ಷಿಣ ಕನ್ನಡದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಪ್ರವಾಹ ಸೇರಿದಂತೆ ಅನಾಹುತಗಳು ನಡೆಯುತ್ತಲೇ ಇದೆ. ಕರಾವಳಿಯಲ್ಲಿ ಈ ಬಾರಿ ಮಳೆಯೇ ಇಲ್ಲ ಎಂದು ಜನ ಜೂನ್ ತಿಂಗಳಿನಲ್ಲಿ ಆತಂಕದಿಂದಿದ್ದರು. ಆದರೆ ಜುಲೈ ಆರಂಭದಲ್ಲೇ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಅಕ್ಷರಶಃ ತತ್ತರಿಸಿಸುತ್ತಿದ್ದಾರೆ. ಒಂದ್ಕಡೆ ಬಿಟ್ಟುಬಿಡದ ಮಳೆ, ಇನ್ನೊಂದ್ಕಡೆ ಸಾಲು ಸಾಲು ಅವಾಂತರ. ಜಿಲ್ಲೆಯಲ್ಲಿ ಇಂದೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಾಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ : – ತುಂಗಾಭದ್ರ ಗ್ರಾಮದಲ್ಲಿ ಜಿಟಿಜಿಟಿ ಮಳೆಗೆ ಮನೆ ಕುಸಿತ, ಇಬ್ಬರಿಗೆ ಗಂಭೀರ ಗಾಯ
ಈ ಹಿನ್ನೆಲೆ ಅಂಗನವಾಡಿಯಿಂದ ಪ್ರೌಢ ಶಾಲೆಯವರೆಗಿನ ಮಕ್ಕಳಿಗೆ ರಜೆ ನೀಡಲಾಗಿದೆ. ಒಟ್ಟಿನಲ್ಲಿ ಜಿಲ್ಲಾದ್ಯಂತ ಮಳೆ ಮುಂದುವರಿದಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೆಲವೆಡೆ ಈಗಾಗಲೇ ಪ್ರವಾಹದ ನೀರು ನುಗ್ಗಿದೆ. ಇನ್ನೂ ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದು ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : – ಚಿಕ್ಕಮಗಳೂರಿನಲ್ಲಿ ಮಳೆಯಿಂದಾಗಿ ಮನೆ ಕುಸಿತ