ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ. ಆ ಪದ ಬಳಕೆ ಮಾಡೋದೇ ಬೇಕಾಗಿಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ವಿಜಯನಗರದ ಕಮಲಾಪುರ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು ಸಂವಿಧಾನ ಬದಲಾವಣೆ ಮಾಡೋದು ಯಾರಿಂದಲ್ಲೂ ಸಾಧ್ಯವಿಲ್ಲ. ಪದ ಬಳಕೆ ಮಾಡುವಾಗ ಬಹಳ ಮುಂದಾಲೋಚನೆ ಇಟ್ಕೊಂಡು ಪದ ಬಳಕೆ ಮಾಡಬೇಕು. ಇದನ್ನೂ ಓದಿ :- ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಟ್ವಿಟ್ಟರ್ ನಲ್ಲಿ ಹಿಂದೂ ಪರ ಸಂಘಟನೆಗಳ ಅಭಿಯಾನ
ಮಾತನಾಡೋರು ಏನು ಬೇಕಾದನ್ನ ಮಾತನಾಡ್ತಾರೆ. ನಾನು ಮಾನವ ಜಾತಿ ರಕ್ಷಣೆ ಮಾಡಲು ಬಂದವನು. ನನಗೆ ಜಾತಿ, ಧರ್ಮ ಅನ್ನೋದೇನಿಲ್ಲಾ. ನಾನು ನಂಬಿಕೆ ಇಟ್ಟಿರೋದು ಮಾನವ ಧರ್ಮದಲ್ಲಿ ಮಾತ್ರ ಎಂದು ತಿಳಿಸಿದ್ರು.
ಇದನ್ನೂ ಓದಿ :- ಕೋವಿಡ್ 4ನೇ ಅಲೆ- ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ