ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ – ಹೊಸಪೇಟೆ ಮೂಲದ ಡಾ. ಅಪೂರ್ವ ಬಸೂರ್ ಗೆ 191 ನೇ ರ‍್ಯಾಂಕ್‌

ಯುಪಿಎಸ್ಸಿ ( UPSC ) ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಪೂರ್ವ ಬಸೂರ್ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಪೂರ್ವ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ191 ನೇ ರ‍್ಯಾಂಕ್‌ ಪಡೆದಿದ್ದು, ಮೊದಲು ಪ್ರಯತ್ನದಲ್ಲಿಯೇ ತೇರ್ಗಡೆಯಾಗಿರುವುದು ವಿಶೇಷ. ಅಪೂರ್ವ ಅವರು ಮೆಡಿಕಲ್ ಜೆಡಿ ಶ್ರೀಕಾಂತ್ ಬಾಸೂರ್ ಏಕೈಕ ಮಗಳು.

ಅಪೂರ್ವ ಸಹ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು, ಕಳೆದ 8 ವರ್ಷಗಳಿಂದ ಯುಪಿಎಸ್ಸಿ ಪರೀಕ್ಷೆಗಾಗಿ ಓದುತ್ತಿದ್ದರು. ಈ ಕುರಿತು ಅಪೂರ್ವ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ದಿನದ 8 ಗಂಟೆಗಳ ಕಾಲ ನಿರಂತರ ಓದು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಂತೋಷ ಹಂಚಿಕೊಂಡರು. ಮನೆಯಲ್ಲಿ ಪರೀಕ್ಷೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸಿಹಿ ಹಂಚಿ ಕುಟುಂಬಸ್ಥರು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : – ವಿಜಯನಗರದ ಸ್ಮಯೋರ್ ಕಾರ್ಖಾನೆಗೆ ಭೂಮಿ ನೀಡಿ ಮೋಸಹೋದ ರೈತ – ಕಾರ್ಖಾನೆ ಬಳಿ ಪ್ರತಿಭಟನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!