ಕೆಎಸ್ ಆರ್ ಟಿಸಿ ಬಸ್ ಅಪಘಾತ ವಿಚಾರದ ಬಗ್ಗೆ ನಮ್ಮ ವರದಿ ಪ್ರಕಾರ ಅದು ಹಂಪ್ ಬಳಿ ನಿಲ್ಲಿಸುವಾಗ ಆಗಿರೋದು, ಗುಂಡಿ ಇಲ್ಲ ಅಂತ ಗೊತ್ತಾಗಿ ಬಸ್ ಡಿಕ್ಕಿ ಹೊಡೆದಿದೆ ಎಂಬ ಕಾರಣ ನೋಡಬೇಕಿದೆ. ಚಾಲಕರ ಬಳಿ ಪೂರ್ಣ ಮಾಹಿತಿ ಪಡೆದು ತನಿಖೆ ಆಗಬೇಕಾಗಿದೆ. ಇದಕ್ಕೆ ಪಾಲಿಕೆ ಕಾರಣ ಎಂದು ಹೇಳಲು ಆಗುವುದಿಲ್ಲ.
ಹೆಚ್ ಎಸ್ ಆರ್ ಲೇಔಟ್ ನಲ್ಲಿ ಕ್ರೀಡಾಂಗಣ ಬಿದ್ದ ವಿಚಾರ-ಮಳೆ ಗಾಳಿಯಿಂದಾಗಿ ಅದು ಬಿದ್ದಿದೆ ಎಂದು ನಮಗೆ ಗೊತ್ತಾಗಿದೆ. ಗುತ್ತಿಗೆದಾರರೇ ಅದನ್ನ ಮರು ನಿರ್ಮಾಣ ಮಾಡಬೇಕಿದೆ. ಗುತ್ತಿಗೆದಾರ ಯಾರು ಎಂದು ನಮಗೆ ಗೊತ್ತಿಲ್ಲ . ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ. ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಗುಂಡಿ ಮುಚ್ಚುವ ವಿಚಾರ -ಗುಂಡಿಗಳ ಕುರಿತ ಇಂದು ಮಧ್ಯಾಹ್ನ 3 ಗಂಟೆಗೆ ಅನ್ ಲೈನ್ ನಲ್ಲಿ ಸಭೆಯನ್ನು ಮಾಡುತ್ತೇವೆ. ಎಲ್ಲ ಮುಖ್ಯ ಇಂಜಿನಿಯರ್ ಗಳಿಗೂ ಮರು ಸರ್ವೆ ಮಾಡಲು ಸೂಚನೆ ನೀಡಲಾಗುತ್ತದೆ ನಂತರ ಗುಂಡಿ ಮುಚ್ಚುವ ಸಂಬಂಧ ಕ್ರಮ ಕೈಗೊಳ್ಳುತ್ತೆವೆ. ಅಪಾಯದಂಚಿನ ಕಟ್ಟಡಗಳ ತೆರವು ವಿಚಾರ-ಸರ್ವೆ ಮಾರ್ಕಿಂಗ್ ಮಾಡಲಾಗಿದೆ ಪ್ರತಿ ಶನಿವಾರ ತೆರವು ಕಾರ್ಯ ನಡೆಯುತ್ತಿದೆ. ಹಳೆಯ ಕಟ್ಟಡಗಳು ಇರುವುದರಿಂದ ಮಾಹಿತಿ ಕೊಡಲಾಗಿದೆ. ಇದನ್ನೂ ಓದಿ : – ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
ಕೆಲವೊಂದು ಲೋ ಲೆವೆಲ್ ಕಟ್ಟಡ ಇದೆ ಮತ್ತಷ್ಟು ದೊಡ್ಡ ಎತ್ತರದ ಕಟ್ಟಡಗಳು ಇದೆ ಇದರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮಳೆಗಾಲದ ಮುನ್ನಚ್ಚರಿಕೆ ವಿಚಾರ- ಸಂಬಂಧಿತ ಟೀಂ ಜೊತೆ ಚರ್ಚೆ ಆಗಿದೆ. ಅಪಾಯಕಾರಿ ಪಟ್ಡಿ ಸಿದ್ಧ ಮಾಡಲಾಗುತ್ತಿದೆ.ಅಪಾಯಗಳ ಮಾಹಿತಿಯನ್ನು ನಾಗರಿಕರೇ ಕೊಡಬೇಕು. ಅಪಾಯಕಾರಿ ಮರದ ಮಾಹಿತಿ ಕೊಡಲು ನಾಗರಿಕರಿಗೆ ಅವಕಾಶವಿದೆ ಪಾಲಿಕೆ ಎಲ್ಲ ವಿಚಾರಕ್ಕಾಗಿ ಬಿಬಿಎಂಪಿಯ ಸಹಾಯ ಆ್ಯಪ್ ನೇ ಬಳಸಿಕೊಳ್ಳಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ (TUSHAR GIRINATH ) ಮನವಿ ಮಾಡಿದ್ದಾರೆ. ಇದನ್ನೂ ಓದಿ : – ಪ್ರತಿಯೊಂದಕ್ಕೂ ಜಾತಿ,ಧರ್ಮ,ಪಕ್ಷ ತರಬೇಡಿ – ಯು.ಟಿ ಖಾದರ್