ಭಾರತ್ ಜೋಡೋ ಯಾತ್ರೆಗೆ KGF ಮ್ಯೂಸಿಕ್ ಬಳಕೆ – ರಾಹುಲ್ ವಿರುದ್ಧ FIR

ಭಾರತೀಯ ರಾಷ್ಟ್ರೀಯ ಕಾಂಗ್ರಸ್ (Congress) ಪಕ್ಷದ ಭಾರತ್ ಜೋಡೋ ಯಾತ್ರೆ (Bharath jodo yathra) ಯ ವಿಡಿಯೋಗಳಿಗೆ ‘ಕೆಜಿಎಫ್’ ಸಿನಿಮಾ (KGF movie) ದ ಹಾಡೊಂದರ ಮ್ಯೂಸಿಕ್ ಬಳಸಿರುವ ಆರೋಪ ಕೇಳಿ ಬಂದಿದ್ದು, ಕಾಪಿ ರೈಟ್ಸ್ ಉಲ್ಲಂಘನೆಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಎಮ್.ಆರ್.ಟಿ ಸಂಸ್ಥೆಯು ಕಾನೂನು ಸಮರಕ್ಕೆ ಮುಂದಾಗಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರಸ್ (Congress) ಪಕ್ಷದ ಭಾರತ್ ಜೋಡೋ ಯಾತ್ರೆ (Bharath jodo yathra) ಯ ವಿಡಿಯೋಗಳಿಗೆ ‘ಕೆಜಿಎಫ್’ ಸಿನಿಮಾ (KGF movie) ದ ಹಾಡೊಂದರ ಮ್ಯೂಸಿಕ್ ಬಳಸಿರುವ ಆರೋಪ ಕೇಳಿ ಬಂದಿದ್ದು, ಕಾಪಿ ರೈಟ್ಸ್ ಉಲ್ಲಂಘನೆಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಎಮ್.ಆರ್.ಟಿ ಸಂಸ್ಥೆಯು ಕಾನೂನು ಸಮರಕ್ಕೆ ಮುಂದಾಗಿದೆ. ತಮ್ಮ ಸಂಸ್ಥೆಯ ಅನುಮತಿ ಇಲ್ಲದೇ, ಕೆಜಿಎಫ್ ಸಿನಿಮಾದ ಸಂಗೀತವನ್ನು ಬಳಸಿಕೊಂಡಿದ್ದಕ್ಕಾಗಿ ಸಂಸ್ಥೆಯು ದೂರು ದಾಖಲಿಸಿದೆ.

MRT ಸಂಸ್ಥೆಗೆ ಸೇರಿದ ಹಾಡುಗಳನ್ನು ಬಳಸಿದ ಆರೋಪ ಹೊತ್ತಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು, ಸಂಸ್ಥೆಯ ಅನುಮತಿ ಇಲ್ಲದೇ ಹಾಡುಗಳನ್ನು ಯಾತ್ರೆಯಲ್ಲಿ ಬಳಸಿದ್ದಾರೆ. ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವರ MRT ಸಂಸ್ಥೆಯು ರಾಹುಲ್ ಗಾಂಧಿ (Rahul gandhi) , ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ ವಿರುದ್ಧ ದೂರು ದಾಖಲಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಯಶ್ (Yash) ನಟನೆಯ ಕೆಜಿಎಫ್ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆಯನ್ನು ಬರೆದಂತಹ ಚಿತ್ರ. ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ರಿಲೀಸ್ ಆದ ಎಲ್ಲಾ ಭಾಷೆಗಳಲ್ಲೂ ಚಿತ್ರ ಕೋಟಿ ಕೋಟಿ ಬಾಚಿದೆ. ಅಲ್ಲದೇ, ಈ ಸಿನಿಮಾದ ಸುಲ್ತಾನ ಹಾಡು ಕೂಡ ಅಷ್ಟೇ ಫೇಮಸ್ ಆಗಿತ್ತು. ಸಿನಿಮಾದ ಹೀರೋನನ್ನು ವೈಭವೀಕರಿಸುವ ಹಾಡು ಇದಾಗಿತ್ತು. ಇದೇ ಹಾಡನ್ನು ಕಾಂಗ್ರೆಸ್ ತನ್ನ ಯಾತ್ರೆಗೆ ಬಳಸಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇದನ್ನೂ ಓದಿ : – ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೈಸೂರು ಭಾಗದಲ್ಲಿ ಎಷ್ಟು ಶಿಶು ಹತ್ಯೆ ಆಗಿದೆ – ಸುಧಾಕರ್ ಪ್ರಶ್ನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!